Webdunia - Bharat's app for daily news and videos

Install App

Karnataka weather: ವಾರಂತ್ಯದಲ್ಲಿ ಬಿಸಿಲೂ ಹೆಚ್ಚು, ಚಳಿಯೂ ಇರಲಿದೆ

Krishnaveni K
ಶನಿವಾರ, 14 ಫೆಬ್ರವರಿ 2026 (09:25 IST)
ಬೆಂಗಳೂರು: ರಾಜ್ಯದಲ್ಲಿ ಈಗ ತಾಪಮಾನದಲ್ಲಿ ದಿನೇ ದಿನೇ ಏರಿಕೆ ಕಂಡುಬರುತ್ತಿದೆ. ಈಗ ರಾಜ್ಯದ ಹವಾಮಾನ ಹೇಗಿದೆ ಎಂದರೆ ಬಿಸಿಲೂ ಹೆಚ್ಚು, ಚಳಿಯೂ ಹೆಚ್ಚು ಎಂಬಂತಾಗಿದೆ.

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕನಿಷ್ಠ ತಾಪಮಾನದಲ್ಲಿ ಕೊಂಡ ಏರಿಕೆ ಕಂಡುಬರುತ್ತಿದೆ. ಚಳಿಯೂ ತಕ್ಕಮಟ್ಟಿಗೆ ಕಡಿಮೆಯಾಗಿದ್ದರೂ ಪೂರ್ತಿ ಕಡಿಮೆಯಾಗಿಲ್ಲ. ರಾತ್ರಿ ಹೊತ್ತು ಚಳಿ ಕಂಡುಬರುತ್ತಿದೆ. ಶುಷ್ಕ ಹವೆ ಮುಂದುವರಿದಿದೆ.

ಈ ವಾರಂತ್ಯಕ್ಕೆ ರಾಜ್ಯದಲ್ಲಿ ಗರಿಷ್ಠ ತಾಪಮಾನ 30-31 ಡಿಗ್ರಿಯಷ್ಟು ಕಂಡುಬರುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನ 17 ಡಿಗ್ರಿಯಷ್ಟು ಕಂಡುಬರುವುದು. ರಾತ್ರಿ ಚಳಿಯಿರಲಿದ್ದು, ಹಗಲು ವಿಪರೀತ ಬಿಸಿಲಿನ ವಾತಾವರಣವಿರಲಿದೆ.

ಬೆಂಗಳೂರಿನಲ್ಲೂ ಗರಿಷ್ಠ ತಾಪಮಾನ 30 ಡಿಗ್ರಿಗೆ ತಲುಪಲಿದೆ. ಕನಿಷ್ಠ ತಾಪಮಾನ 16 ಡಿಗ್ರಿಯಷ್ಟು ಕಂಡುಬರುವುದು. ಕರಾವಳಿ ಜಿಲ್ಲೆಗಳಲ್ಲಿ 34 ಡಿಗ್ರಿಗೆ ಏರಿಕೆಯಾಗಲಿದ್ದು ಕನಿಷ್ಠ ತಾಪಮಾನ 22 ಡಿಗ್ರಿಯಷ್ಟು ಕಂಡುಬರುವುದು. ಸದ್ಯಕ್ಕೆ ಮಳೆಯ ಸೂಚನೆಯಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೈದರಾಬಾದ್ ಬಳಿ ವೇಗವಾಗಿ ಬಂದ ಬಸ್ ಪೆಟ್ರೋಲ್ ಬಂಕ್‌ಗೆ ಡಿಕ್ಕಿ, ಭಾರಿ ದುರಂತ, Video

ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸಲು ನಮಗೊಂದು ಅವಕಾಶ ಕೊಡಿ: ಬಿವೈ ವಿಜಯೇಂದ್ರ

18th BRICS: ರಾಷ್ಟ್ರ ರಾಜಧಾನಿಯಲ್ಲಿ ನಿಯೋಜನೆಗೊಂಡ ಪೊಲೀಸರೆಷ್ಟು ಗೊತ್ತಾ

ನದಿ ನೀರನ್ನು ಕಲುಷಿತಗೊಳಿಸಿದ್ರೆ ಕಾರ್ಖಾನೆಗಳಿಗೆ ಬೀಗ ಗ್ಯಾರಂಟಿ: ರಾಮಲಿಂಗಾರೆಡ್ಡಿ ವಾರ್ನಿಂಗ್

ಹಣ ಕಲೆಕ್ಷನ್ ವಿಚಾರಕ್ಕೆ ಕೈ ಕೈ ಮಿಲಾಯಿಸಿಕೊಂಡ ಎರಡು ಗುಂಪಿನ ತೃತೀಯ ಲಿಂಗಿಗಳು, Video

ಮುಂದಿನ ಸುದ್ದಿ
Show comments