Webdunia - Bharat's app for daily news and videos

Install App

Karnataka Weather: ಇಂದು ಬಿಸಿಲು ಹೆಚ್ಚಾಗಲಿದೆ, ಆದರೆ ಇಲ್ಲಿದೆ ಟ್ವಿಸ್ಟ್

Krishnaveni K
ಮಂಗಳವಾರ, 17 ಫೆಬ್ರವರಿ 2026 (08:38 IST)
ಬೆಂಗಳೂರು: ರಾಜ್ಯಾದ್ಯಂತ ಈಗ ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ನಡುವೆಯೂ ಹವಾಮಾನದಲ್ಲಿ ಇಂದು ಒಂದು ಬದಲಾವಣೆ ಕಂಡುಬರಲಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ.
 

ರಾಜ್ಯದಲ್ಲಿ ಈಗ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಹಗಲು ವಿಪರೀತ ಬಿಸಿಲಿನ ಝಳ ಕಂಡುಬರುತ್ತಿದೆ. ಮಧ್ಯಾಹ್ನದ ವೇಳೆಗೆ ಹೊರಗೆ ಕಾಲಿಡಲೂ ಆಗದಷ್ಟು ಬಿಸಿಲಿರುತ್ತದೆ. ಹಾಗಿದ್ದರೂ ಇನ್ನೂ ಚಳಿ ಕಡಿಮೆಯಾಗಿಲ್ಲ ಎನ್ನುವುದೇ ವಿಶೇಷ.

ಇಂದು ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 30 ಡಿಗ್ರಿಯಿರಲಿದೆ. ಹಗಲು ವಿಪರೀತ ಬಿಸಿಲು ಕಂಡುಬರುವುದು. ನಿನ್ನೆಗೆ ಹೋಲಿಸಿದರೆ ಇಂದು ಮತ್ತಷ್ಟು ಶುಭ್ರ ಆಕಾಶವಿರಲಿದೆ. ಹಾಗಿದ್ದರೂ ಇಂದು ಕನಿಷ್ಠ ತಾಪಮಾನ ಸರಾಸರಿ 16 ಡಿಗ್ರಿಯಷ್ಟಿರಲಿದ್ದು ಇದರಿಂದಾಗಿ ಚಳಿಯೂ ತೀವ್ರವಾಗಿರಲಿದೆ ಎನ್ನುವುದೇ ಇಂದಿನ ಹವಾಮಾನದಲ್ಲಿ ಟ್ವಿಸ್ಟ್.

ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಇನ್ನಷ್ಟು ತೀವ್ರವಾಗಲಿದೆ. ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ತಲುಪಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಿರಲಿದೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿಯಷ್ಟಾಗಲಿದೆ. ಆದರೆ ಕೋಲಾರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿಯಷ್ಟಿರಲಿದ್ದು ಕನಿಷ್ಠ ತಾಪಮಾನ 15 ಡಿಗ್ರಿಗೆ ಇಳಿಕೆಯಾಗಲಿದೆ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿಗೆ ಏರಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

BRICS: ಪ್ರಧಾನಿ ಮೋದಿ ಶೇಕ್ ಹ್ಯಾಂಡ್ ಮಾಡುತ್ತಲೇ ಅಜಿತ್ ದೋವಲ್ ಗೆ ರಷ್ಯಾ ಅಧ್ಯಕ್ಷ ಪುಟಿನ್ ಮಾಡಿದ ಸನ್ನೆ ಭಾರೀ ವೈರಲ್ Video

ವಂದೇ ಮಾತರಂಗಾಗಿ ಪಾದಯಾತ್ರೆ ಮಾಡಲು ಹೊರಟ ಬಿಜೆಪಿ

ಗಣೇಶೋತ್ಸವ ಮಸೀದಿ ರಸ್ತೆಯಲ್ಲಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ ಎಂದ ಇನ್ಸ್ ಪೆಕ್ಟರ್ ಧನಂಜಯ್: ಠಾಣೆಗೆ ನುಗ್ಗುತ್ತೇವೆ ಎಂದ ಪ್ರತಾಪ್ ಸಿಂಹ

ಲಿಫ್ಟ್ ನೊಳಗೆ ಮೂತ್ರ ವಿಸರ್ಜಿಸಿ ಅಸಭ್ಯ ವರ್ತನೆ ತೋರಿದವನಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಸಿಕ್ತು Video

ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಯಾವ ಮಟ್ಟಕ್ಕೂ ಇಳಿಯುತ್ತದೆ: ವಿಜಯೇಂದ್ರ

ಮುಂದಿನ ಸುದ್ದಿ
Show comments