Publish Date: Sat, 15 Nov 2025 (08:29 IST)
Updated Date: Sat, 15 Nov 2025 (08:31 IST)
ಬೆಂಗಳೂರು: ಈ ವಾರ ಕೆಲವು ದಿನ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಣ್ಣ ಮಳೆಯಾಗಿದ್ದು ಬಿಟ್ಟರೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವಿತ್ತು. ಈ ವಾರಂತ್ಯಕ್ಕೆ ಮಳೆಯ ಸಾಧ್ಯತೆಯಿದೆಯಾ ಇಲ್ಲಿದೆ ವಿವರ.
ರಾಜ್ಯದಲ್ಲಿ ಈಗ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಅಥವಾ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಶೈತ್ಯ ವಾತಾವರಣವಿದೆ. ಅದರ ಹೊರತಾಗಿ ಈ ವಾರಂತ್ಯಕ್ಕೆ ಮಳೆಯ ಸಾಧ್ಯತೆ ಕಡಿಮೆಯಿದ್ದು ಚಳಿ ಹೆಚ್ಚಾಗಲಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಬೆಂಗಳೂರು, ಕೋಲಾರ, ತುಮಕೂರು, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ವಿಜಯಪುರ, ಬೀದರ್, ಗದಗ, ಕೊಪ್ಪಳ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಹಾವೇರಿ, ರಾಯಚೂರು, ಚಿತ್ರದುರ್ಗ, ಯಾದಗಿರಿ, ಬೆಳಗಾವಿ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಈ ವಾರ ಮಳೆಯ ಸಾಧ್ಯತೆಯಿಲ್ಲ.
ಆದರೆ ಈ ವಾರದಿಂದ ಚಳಿಯ ಪ್ರಮಾಣ ಹೆಚ್ಚಾಗಲಿದೆ. ರಾಜ್ಯದಲ್ಲಿ ಇಂದು ಮತ್ತು ನಾಳೆ ಸರಾಸರಿ ಗರಿಷ್ಠ ತಾಪಮಾನ 27 ಡಿಗ್ರಿಯಷ್ಟಿದ್ದರೆ ಕನಿಷ್ಠ ತಾಪಮಾನ 13 ಡಿಗ್ರಿಯಷ್ಟಿರಲಿದೆ. ವಾರಂತ್ಯದ ಎರಡೂ ದಿನ ಚಳಿ ಪ್ರಮಾಣ ಹೆಚ್ಚಾಗಲಿದೆ.