Publish Date: Mon, 24 Nov 2025 (08:41 IST)
Updated Date: Mon, 24 Nov 2025 (08:44 IST)
ಬೆಂಗಳೂರು: ನವಂಬರ್ ಬಂದರೂ ಮಳೆ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ಕಳೆದ ವಾರವೂ ಅನೇಕ ಕಡೆ ಮಳೆಯಾಗಿತ್ತು. ಈ ವಾರವೂ ಮಳೆಯಿರುತ್ತಾ? ಇಲ್ಲಿದೆ ಲೇಟೆಸ್ಟ್ ಹವಾಮಾನ ವರದಿ.
ವಾರಂತ್ಯದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿತ್ತು. ಈ ವಾರ ಕಳೆದ ವಾರದಷ್ಟು ಮಳೆಯ ಅಬ್ಬರವಿರುವುದಿಲ್ಲ. ಆದರೆ ಆರಂಭದ ದಿನ ಮಳೆಯಾಗುವ ಸೂಚನೆಯಿದೆ. ವಾರದ ಮಧ್ಯಭಾಗದಲ್ಲಿ ಮಳೆಯಿರಲ್ಲ. ಆದರೆ ಚಳಿಯಿರುವುದು. ವಾರಂತ್ಯಕ್ಕೆ ಮೋಡ ಕವಿದ ವಾತಾವರಣವಿರುವ ಸೂಚನೆಯಿದ್ದು ಶೀತ ಹವೆ ಹೆಚ್ಚಾಗಬಹುದು.
ಇಂದು ವಾರದ ಮೊದಲ ದಿನವೇ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ವಿಜಯಪುರ, ಕೋಲಾರ, ಬೆಳಗಾವಿ, ಯಾದಗಿರಿ, ಕಲಬುರಗಿ ಜಿಲ್ಲೆಯಲ್ಲಿ ಇಂದು ಮಳೆಯಾಗಲಿದೆ. ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ.
ರಾಮನಗರ, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಹಾವೇರಿ, ರಾಯಚೂರು, ಗದಗ, ಬೀದರ್, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವಿರಲಿದೆ.