ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಚಳಿ ಹೆಚ್ಚಾಗಿತ್ತು. ಆದರೆ ಇಂದು ದಿಡೀರ್ ಆಗಿ ಮಧ್ಯಾಹ್ನ ಮಳೆಯಾಗಿದೆ.
ರಾಜ್ಯದಲ್ಲಿ ಈಗ ಮಳೆ ಮತ್ತು ಚಳಿಯ ನಡುವೆ ಕಾಂಪಿಟೀಷನ್ ನಡೆಯುತ್ತಿದೆ. ರಾಜ್ಯದ ಬಹುತೇಕ ಕಡೆ ಇಂದು ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಸೂಚಿಸಿದ್ದವು. ಅದರಂತೆ ಬೆಂಗಳೂರಿನಲ್ಲೂ ಸಾಧಾರಣ ಮಳೆಯಾಗುವ ಸೂಚನೆಯಿತ್ತು.
ಇಂದು ಮಧ್ಯಾಹ್ನ ಕೆಆರ್ ಪುರಂ, ಹೆಬ್ಬಾಳ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಆದರೆ ಮಧ್ಯಾಹ್ನ ದಿಡೀರ್ ಮಳೆಯಾಗಿದೆ. ಇದರಿಂದ ಜನ ಕೊಂಚ ಪರದಾಡುವಂತಾಯಿತು.
ಹವಾಮಾನ ವರದಿಗಳ ಪ್ರಕಾರ ವಾರಂತ್ಯದಲ್ಲೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯ ಸೂಚನೆಯಿದೆ. ಚಳಿಯ ಜೊತೆಗೆ ಮಳೆಯೂ ಇರುವುದರಿಂದ ತಾಪಮಾನ ಇನ್ನಷ್ಟು ಕನಿಷ್ಠ ಮಟ್ಟಕ್ಕೇರುವ ಸಾಧ್ಯತೆಯಿದೆ.