Webdunia - Bharat's app for daily news and videos

Install App

Karnataka SSLC Exam result 2025: ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ, ಹುಡುಗಿಯರೇ ಫಸ್ಟ್

Krishnaveni K
ಶುಕ್ರವಾರ, 2 ಮೇ 2025 (12:45 IST)
ಬೆಂಗಳೂರು: ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ 2025 ಇದೀಗ ಪ್ರಕಟವಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಒಟ್ಟು ಶೇ.66.14 ರಷ್ಟು ಫಲಿತಾಂಶ ಬಂದಿದೆ.

ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ 8% ಹೆಚ್ಚು ಫಲಿತಾಂಶ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ 91.12% ದೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಉಡುಪಿ ಜಿಲ್ಲೆ (89.96%) ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಉತ್ತರ ಕನ್ನಡ ಜಿಲ್ಲೆ (83.19%) ಮೂರನೇ ಸ್ಥಾನ,  ಶಿವಮೊಗ್ಗ (82.29%) ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಗ್ರೇಸ್ ಅಂಕ ನೀಡಲಾಗಿರಲಿಲ್ಲ. ಹಾಗಿದ್ದರೂ ಉತ್ತಮ ಫಲಿತಾಂಶ ಬಂದಿರುವುದಕ್ಕೆ ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ವಿಶೇಷವೆಂದರೆ ಈ ಬಾರಿ 22 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದು ತೇರ್ಗಡೆಯಾಗಿದ್ದಾರೆ. 144 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. https://karresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅರ್ಧಸೇವಿಸಿದ ಸ್ಯಾಂಡ್‌ವಿಜ್‌ನಲ್ಲಿ ಏನೋ ಉರುಳಾಡುತ್ತಿದೆ ಎಂದು ನೋಡಿದಾಗ ಕಂಡಿದ್ದು ಜೀವಂತ ಹುಳು, Video

ದಕ್ಷಿಣ ಕನ್ನಡದಲ್ಲಿ ನಾಳೆ ಈದ್ ಮಿಲಾದ್‌: ಈಚೆಗಿನ ಸಂಘರ್ಷ ನಡುವೆ ಹೆಚ್ಚಿಸಿದ ಬಿಗಿ ಭದ್ರತೆ

ಪಡುಬಿದ್ರಿ ಡೇವಿಡ್ ಡಿಸೋಜಾ ಹತ್ಯೆ ಹಿಂದಿನ ಉದ್ದೇಶ ಕೊನೆಗೂ ಬಯಲು

ತಮಿಳುನಾಡು ವಿಧಾನಸಭೆಯ ಐದು ಉಪಚುನಾವಣೆಗಳ ಮೇಲಿನ ತಡೆಯಾಜ್ಞೆ ವಿಸ್ತರಣೆ

ಒಬ್ಬರೇ ವಾಸವಿದ್ದ ಮಹಿಳೆಯ ಮನೆಯನ್ನು ಶೋಧ ನಡೆಸಿದಾಗ ಸಿಕ್ತು ಲಕ್ಷ ಲಕ್ಷ ಹಣ

ಮುಂದಿನ ಸುದ್ದಿ
Show comments