Select Your Language

Notifications

webdunia
webdunia
webdunia
webdunia

ಕರ್ನಾಟಕ ಲಲಿತಾ ಅಕಾಡೆಮಿ ಹೊಸ ಅವತಾರ

ಕರ್ನಾಟಕ ಲಲಿತಾ ಅಕಾಡೆಮಿ ಹೊಸ ಅವತಾರ
ಬೆಂಗಳೂರು , ಗುರುವಾರ, 21 ಅಕ್ಟೋಬರ್ 2021 (16:44 IST)
ದೃಶ್ಯಕಲಾ ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ವೃದ್ಧಿಸುವ ದೃಷ್ಟಿಯಿಂದ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಜತೆಗೂಡಿ “ಹೊಸ ಸಾಧನೆಗಳು ಹೊಸ ಪರಿಕಲ್ಪನೆಗಳು” ಯೋಜನೆ ಸೃಜಿಸಿದೆ.
ವಿದ್ಯಾರ್ಥಿಗಳು ಕೇವಲ ಚಿತ್ರ ಬಿಡಿಸುವುದರಲ್ಲಷ್ಟೇ ಅಲ್ಲದೆ ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೃಶ್ಯಕಲೆ ಸಂಬಂಧ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ.
ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಕೌಶಲ್ಯ ತರಬೇತಿ ಇದರಲ್ಲಿದ್ದು, ದೃಶ್ಯಕಲಾ ವಿದ್ಯಾರ್ಥಿಗಳು ಹೊಸತನಕ್ಕೆ ತೆರೆದುಕೊಳ್ಳಲು ಲಲಿತಕಲಾ ಮತ್ತು ಶಿಲ್ಪಕಲಾ ಅಕಾಡೆಮಿಗಳು ಕ್ರಿಯಾಯೋಜನೆ ರೂಪಿಸಿವೆ.
ಈ ಯೋಜನೆಯಲ್ಲಿ ಅಧ್ಯಾಪಕರಿಗೆ ಮೊದಲು ಕೌಶ್ಯದ ಬಗ್ಗೆ ಮಾಹಿತಿ ನೀಡುವುದು ಬಳಿಕ ಅವರು ತರಗತಿಗಳಲ್ಲಿ ಕಲಿಕೆ ಜತೆಗೆ ವಿದ್ಯಾರ್ಥಿಗಳಿಗೆ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪಠ್ಯಕ್ರಮವನ್ನು ಹೊಂದಿಸಲಾ ಗಿದೆ. ರಾಜ್ಯದ ವಿವಿಧ ಭಾಗದ ಸುಮಾರು 70 ದೃಶ್ಯಕಲಾ ಕಾಲೇಜು ಅಧ್ಯಾಪಕರು ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಮೆಟ್ರೋ ಹುದ್ದೆಗೆ ಅರ್ಜಿ