Select Your Language

Notifications

webdunia
webdunia
webdunia
webdunia

ಸಂಪುಟದಲ್ಲಿ ಚರ್ಚಿಸಿ ಕಿತ್ತೂರು ಕರ್ನಾಟಕ ಘೊಷಣೆ

ಸಂಪುಟದಲ್ಲಿ ಚರ್ಚಿಸಿ ಕಿತ್ತೂರು ಕರ್ನಾಟಕ ಘೊಷಣೆ
ಬೆಳಗಾವಿ , ಗುರುವಾರ, 21 ಅಕ್ಟೋಬರ್ 2021 (08:46 IST)
ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾದ 'ಕಿತ್ತೂರು ಕರ್ನಾಟಕ 'ಘೊಷಣೆ ಕುರಿತು ಸಂಪುಟದಲ್ಲಿ ರ್ಚಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್-ಕರ್ನಾಟಕ ಭಾಗವನ್ನು 'ಕಲ್ಯಾಣ ಕರ್ನಾಟಕ' ಎಂದು ಘೊಷಣೆ ಮಾಡಿರುವಂತೆ ಬೆಳಗಾವಿ ಭಾಗವನ್ನು 'ಕಿತ್ತೂರು ಕರ್ನಾಟಕ' ಎಂದು ಘೊಷಿಸುವ ಕುರಿತು ಸಚಿವ ಸಂಪುಟದಲ್ಲಿ ರ್ಚಚಿಸಲಾಗುವುದು. ಆ ಬಳಿಕ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಅ.23ರಿಂದ ಎರಡು ದಿನ ಜರುಗಲಿರುವ ಕಿತ್ತೂರು ಉತ್ಸವದಲ್ಲಿ ಭಾಗವಹಿಸುತ್ತೇನೆ ಎಂದರು.
ಕೋವಿಡ್-19 ಕಾರಣದಿಂದಾಗಿ ಅದ್ದೂರಿ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಿಲ್ಲ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಅದ್ದೂರಿ ರಾಜ್ಯೋತ್ಸವ ಆಚರಣೆಗೆ ವಿವಿಧ ಕನ್ನಡಪರ ಸಂಘಟನೆಗಳು ಒತ್ತಾಯ ಮಾಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ತಜ್ಞರ ಸಮಿತಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ರ್ಚಚಿಸಿ, ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಭಾರೀ ಮಳೆ