Webdunia - Bharat's app for daily news and videos

Install App

ಕರ್ನಾಟಕ-ಕೇರಳ ಅಂತರಾಜ್ಯ ಬಸ್‌ ಸಂಚಾರ ಇನ್ನು ಒಂದು ವಾರ ಯಥಾಸ್ಥಿತಿ

Webdunia
ಶನಿವಾರ, 30 ಅಕ್ಟೋಬರ್ 2021 (20:54 IST)
ಮಂಗಳೂರು: ಸದ್ಯಕ್ಕೆ ಕರ್ನಾಟಕ-ಕೇರಳ ಅಂತರಾಜ್ಯ ಬಸ್ ಸಂಚಾರ ಪುನರಾರಂಭವಾಗುವುದು ಅನುಮಾನವಾಗಿದ್ದು, ಒಂದು ವಾರ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ನ.1ರಿಂದ ಬಸ್ ಸಂಚಾರ ಪುನರಾರಂಭವಾಗುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ. ಆದರೆ, ಒಂದು ವಾರದ ಕಾಲ ಅಂತರಾಜ್ಯ ಬಸ್ ಸಂಚಾರ ಪುನರಾರಂಭವಾಗದು ಎಂದು ದ.ಕ ಅಧಿಕೃತ ಹೇಳಿದೆ. ಈ ವಿಚಾರವಾಗಿ ಕೇರಳ ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು ತಿಳಿಸಿದ್ದು, “ಕರ್ನಾಟಕ ಬಸ್‌ಗಳು ರಾಜ್ಯಕ್ಕೆ ಪ್ರವೇಶಿಸಲು, ನಮ್ಮ ಬಸ್‌ಗಳನ್ನು ಕರ್ನಾಟಕಕ್ಕೆ ಬಿಡಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆ ಬಸ್‌ಗಳು ಗಡಿ ದಾಟಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ ಸರ್ಕಾರವು ತಕ್ಷಣವೇ ನಮ್ಮಲ್ಲಿಂದ ಬಸ್ ಅನ್ನು ಪ್ರಾರಂಭಿಸಬೇಕು” ಎಂದು ಹೇಳಿದರು.”ಕೇರಳದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಗೆ ಬಾರದೆ ಇದ್ದಲ್ಲಿ ಅಂತರಾಜ್ಯ ಬಸ್ ಪುನರಾರಂಭಿಸಲು ಸಾಧ್ಯವಿಲ್ಲ. ಈ ಬಗ್ಗೆ ಇನ್ನೂ ಒಂದು ವಾರದ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಿಲ್ಲ” ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿಇನ್.ಕರ್ನಾಟಕ-ಕೇರಳ ಅಂತರಾಜ್ಯ ಬಸ್ ಸಂಚಾರ ನಿರ್ಬಂಧದ ಮಧ್ಯೆಯೇ ಎ. 25ರಿಂದ ಕರ್ನಾಟಕದಲ್ಲಿ ಪ್ರಾಥಮಿಕ ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳು ಪ್ರಾರಂಭವಾಗಿವೆ.ದ.ಕ ಜಿಲ್ಲೆಯ ವಿವಿಧ ಕಾಸರಗೋಡು ಭಾಗದಿಂದ ಸುಮಾರು 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಕಡ್ಡಾಯವಾಗಿ ತರಗತಿಗೆ ಹಾಜರಾಗಬೇಕೆಂದಿಲ್ಲ. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಆದರೆ, ಒಂದೂವರೆ ವರ್ಷದಿಂದ ಮನೆಯಲ್ಲಿಯೇ ಉಳಿದಿರುವ ವಿದ್ಯಾರ್ಥಿಗಳು ಅನೇಕ ಮಂದಿ ಈಗ ತರಗತಿಗೆ ಹಾಜರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೇ ಪ್ರಜ್ವಲ್ ರೇವಣ್ಣ ಏನು ಮಾಡಿದ್ರು

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮಹತ್ವದ ತೀರ್ಪು ಕೊಟ್ಟ ಕೋರ್ಟ್

ಸ್ವಾತಂತ್ರ್ಯಕ್ಕೆ ದಿನಕ್ಕೆ ಪ್ರಧಾನಿ ಮೋದಿ ಏನು ಭಾಷಣ ಮಾಡಬೇಕು, ನೀವೇ ನಿರ್ಧರಿಸಲು ಇಲ್ಲಿದೆ ಅವಕಾಶ

ಅಮೆರಿಕಾಗೆ ತಕ್ಕ ತಿರುಗೇಟು ಕೊಟ್ಟ ಭಾರತ: ಯುದ್ಧ ವಿಮಾನ ಖರೀದಿ ಡೀಲ್ ಕ್ಯಾನ್ಸಲ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments