ನವದೆಹಲಿ : ಫೇಸ್ ಬುಕ್ ( Facebook ) ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ( WhatsApp ) ಇನ್ಮುಂದೆ ನವೆಂಬರ್ 1ರಿಂದ ಕೆಲವು ಸ್ಮಾರ್ಟ್ ಫೋನ್ʼಗಳಲ್ಲಿ ( Smart Phone ) ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ ನಿಮ್ಮ ಸ್ಮಾರ್ಟ್ ಫೋನ್ʼನಲ್ಲಿ ವಾಟ್ಸಾಪ್ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನ ಪರಿಶೀಲಿಸುವುದು ಮುಖ್ಯ.
ವಾಟ್ಸಾಪ್ ವಿಶ್ವದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಮೆಸೇಜಿಂಗ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿದ್ದು, ಇದು ಜನರಿಗೆ ಸಂವಹನ ನಡೆಸಲು ಸಾಕಷ್ಟು ಪ್ರಮುಖ ವಿಷಯವಾಗಿದೆ. ಹೆಚ್ಚಿನ ಬಳಕೆದಾರರು ಶೀಘ್ರದಲ್ಲೇ ವಾಟ್ಸಾಪ್ ಖಾತೆಗಳಿಗೆ ತಮ್ಮ ಪ್ರವೇಶವನ್ನ ನವೆಂಬರ್ 1ರ ಮುಂದಿನ 10 ದಿನಗಳಲ್ಲಿ ಕಳೆದುಕೊಳ್ಳಲಿದ್ದಾರೆ. ಇದರರ್ಥ ಈ ಸ್ಮಾರ್ಟ್ ಪೋನ್ ಬಳಕೆದಾರರು ಖಾತೆಗಳನ್ನು ಕಳೆದುಕೊಳ್ಳದಂತೆ ಪರ್ಯಾಯವನ್ನ ಕಂಡುಕೊಳ್ಳಬೇಕು.
ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ವಾಟ್ಸಪ್ ಸುಮಾರು 40 ಸ್ಮಾರ್ಟ್ ಫೋನ್ʼಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ವರದಿಯ ಪ್ರಕಾರ, ಆಂಡ್ರಾಯ್ಡ್ 4.0.4 ಮತ್ತು ಹಳೆಯ ವೇರಿಯಂಟ್ʼಗಳನ್ನು ಚಾಲನೆ ಮಾಡುವ ಸ್ಮಾರ್ಟ್ ಫೋನ್ʼಗಳು ವಾಟ್ಸಪ್ ಬೆಂಬಲವನ್ನು ಮುಂದಿನ 10 ದಿನಗಳಲ್ಲಿ ಪಡೆಯುವುದನ್ನು ನಿಲ್ಲಿಸುತ್ತವೆ. ಆಪಲ್ ವಿಷಯಕ್ಕೆ ಬಂದಾಗ, ಐಒಎಸ್ 9-ಚಾಲನೆಯಲ್ಲಿರುವ ಐಫೋನ್ʼಗಳನ್ನು ಬೂಟ್ ಔಟ್ ಮಾಡಲಾಗುತ್ತದೆ.
ವಾಟ್ಸಾಪ್ ಕಾರ್ಯ ನಿರ್ವಹಿಸದ ಸ್ಮಾರ್ಟ್ ಫೋನ್ʼಗಳ ಪಟ್ಟಿ ಇಲ್ಲಿದೆ.