Select Your Language

Notifications

webdunia
webdunia
webdunia
webdunia

ಪಿಎಂಎಫ್ಎಂಇ ಯೋಜನೆಗೆ ಶೇ.15ರಷ್ಟು ಹೆಚ್ಚುವರಿ ಸಹಾಯಧನ ನೀಡಿದ ಕರ್ನಾಟಕ ಸರಕಾರ

ಪಿಎಂಎಫ್ಎಂಇ ಯೋಜನೆಗೆ ಶೇ.15ರಷ್ಟು ಹೆಚ್ಚುವರಿ ಸಹಾಯಧನ ನೀಡಿದ ಕರ್ನಾಟಕ ಸರಕಾರ
bangalore , ಸೋಮವಾರ, 17 ಜನವರಿ 2022 (21:08 IST)
ಬೆಂಗಳೂರು: ರೈತರಿಗೆ ಬಲ ತುಂಬಲು ರಾಜ್ಯ ಸರಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ಪಿಎಂಎಫ್ಎಂಇ ಯೋಜನೆಗೆ ಕೇಂದ್ರ ಸರಕಾರ ಕರ್ನಾಟಕಕ್ಕೆ ಶೇ. 35ರಷ್ಟು ಅನುದಾನ ಒದಗಿಸಿತ್ತು. ಇದೀಗ ರಾಜ್ಯ ಸರಕಾರ ರೈತರ ಅನುಕೂಲಕ್ಕಾಗಿ ಶೇ.15ರಷ್ಟು ಹೆಚ್ಚಿನ ಸಹಾಯಧನ ನೀಡಿದೆ. ಇದರಿಂದ ಈಗ ಪಿಎಂಎಫ್ಎಂಇ ಯೋಜನೆಯ ಸಹಾಯಧನ ಶೇ. 50ರಷ್ಟಾಗಿದೆ.
ಪ್ರಧಾನ ಮಂತ್ರಿಗಳ ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಹಾಗೂ ಇತರ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರ ಶೇ. 35ರಷ್ಟನ್ನು ಒದಗಿಸಿತ್ತು. ಕಳೆದ ಬಾರಿ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯ ಸರಕಾರ ಶೇ. 15ರಷ್ಟು ಸಹಾಯಧನ ನೀಡಿದ್ದು, ಈಗ ಸಹಾಯಧನ ಶೇ. 50ಕ್ಕೆ ಹೆಚ್ಚಿದೆ.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ ಅಡಿ ಪಿಎಂಎಫ್ಎಂಇ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಕೃಷಿ ಇಲಾಖೆಯನ್ನು ರಾಜ್ಯದ ನೋಡಲ್ ಇಲಾಖೆಯನ್ನಾಗಿಯೂ ಕೆಪೆಕ್ ಸಂಸ್ಥೆಯನ್ನು ನೋಡಲ್ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯು 5 ವರ್ಷಗಳ ಅವಧಿಯಲ್ಲಿ 2020-21ನೇ ಸಾಲಿನಿಂದ 2024-25ನೇ ಸಾಲಿನವರೆಗೂ ಜಾರಿಯಲ್ಲಿರುತ್ತದೆ. 2021-22ನೇ ಸಾಲಿನಲ್ಲಿ 2651 ವೈಯಕ್ತಿಕ ಉದ್ದಿಮೆದಾರರಿಗೆ ಹಾಗೂ ಗುಂಪುಗಳಿಗೆ 100 ಉದ್ದಿಮೆಗಳ ಸ್ಥಾಪನೆಗೆ ಸಹಾಯಧನ ಒದಗಿಸುವ ಗುರಿ ಹೊಂದಲಾಗಿದೆ.
ಸರಕಾರ ರೈತರ ಅನುಕೂಲಕ್ಕಾಗಿ ಅನುದಾನ ಹೆಚ್ಚಿಸಿರುವುದನ್ನು ಶ್ಲಾಘಿಸಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ರೈತಾಪಿ ಗುಂಪುಗಳು ಮತ್ತು ವೈಯಕ್ತಿಕ ಉದ್ದಿಮೆದಾರರು ಯೋಜನೆಯ ಸದುಪಯೋಗ ಪಡಿಸಿಕೊಂಡು ಆದಾಯ ವೃದ್ಧಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಬೇಳೆಕಾಳು ಸರಬರಾಜು ಆರೋಪ