Publish Date: Wed, 14 Mar 2018 (08:57 IST)
Updated Date: Wed, 14 Mar 2018 (08:59 IST)
ಬೆಂಗಳೂರು: ಇನ್ನೇನು ಚುನಾವಣೆ ಬಂತು. ರಾಜಕೀಯ ಪಕ್ಷಗಳ ಟಿಕೆಟ್ ಭರಾಟೆ ಶುರುವಾಯ್ತ. ಇಂದು ರಾಜ್ಯ ಕಾಂಗ್ರೆಸ್ ನಾಯಕರು ಟಿಕೆಟ್ ಹಂಚಿಕೆಗಾಗಿ ಸಭೆ ಸೇರುತ್ತಿದ್ದಾರೆ.
ಬೆಂಗಳೂರಿನ ಖಾಸಗಿ ರೆಸ್ಟೋರೆಂಟ್ ನಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸೇರಿದಂತೆ ಘಟಾನುಘಟಿ ನಾಯಕರು ಸಭೆ ಸೇರಿ ಟಿಕೆಟ್ ಹಂಚಿಕೆ ಕುರಿತು ಫೈನಲ್ ಪಟ್ಟಿ ತಯಾರಿಸಲಿದ್ದಾರೆ.
ಸಹಜವಾಗಿಯೇ ಟಿಕೆಟ್ ಹಂಚಿಕೆ ನಂತರ ಕೆಲವು ನಾಯಕರ ಅಸಮಾಧಾನ ಸ್ಪೋಟಗೊಳ್ಳುವುದು ಸಹಜ. ಅತ್ತ ಟಿಕೆಟ್ ಆಕಾಂಕ್ಷಿ ನಾಯಕರು ತಮ್ಮ ಹೆಸರು ಮೇಲೆ ಇರುತ್ತಾ ಎಂದು ಕಾತುರದಿಂದ ಕಾಯುವಂತಾಗಿದೆ. ಹೀಗಾಗಿ ಇಂದಿನ ದಿನ ಕಾಂಗ್ರೆಸ್ ನಾಯಕರಿಗೆ ಅಗ್ನಿ ಪರೀಕ್ಷೆಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ