Publish Date: Tue, 13 Mar 2018 (11:54 IST)
Updated Date: Tue, 13 Mar 2018 (13:01 IST)
ಬೆಂಗಳೂರು: ವಿಆರ್ ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ವಿಜಯ್ ಸಂಕೇಶ್ವರ ಹುಬ್ಬಳ್ಳಿಯಲ್ಲಿ ದಿಡೀರ್ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ರಾಜ್ಯ ಸಭೆ ಟಿಕೆಟ್ ನೀಡದೇ ಇರುವುದಕ್ಕೆ ಅಸಮಾಧಾನದ ಕುರಿತಾಗಿ ಸ್ಷಷ್ಟನ ನೀಡಿದ್ದಾರೆ.
ಹಿಂದೆ ವಾಜಪೇಯಿ, ಅಡ್ವಾಣಿ ನನಗೆ ಸಚಿವ ಸ್ಥಾನ ನೀಡಲು ಸಿದ್ಧರಿದ್ದರು. ಆದರೆ ಪತ್ರಿಕೆ ಆರಂಭಿಸಲು ನಾನೇ ಕೈ ಬಿಟ್ಟೆ. ನಂತರ ಮೂರು ಬಾರಿ ಲೋಕಸಭೆಗೆ ಟಿಕೆಟ್ ನೀಡಿದ್ದರು. ಒಮ್ಮೆ ಎಂಎಲ್ ಸಿ ಟಿಕೆಟ್ ಕೊಟ್ಟಿದ್ದರು.
ಆದರೆ ಮೊನ್ನೆ ರಾಜ್ಯ ಸಭೆ ಚುನಾವಣೆಗೆ ನನಗೆ ಟಿಕೆಟ್ ಕೊಡುವುದಾಗಿ ಹೇಳಿ ಪೇಪರ್ ಸಿದ್ಧಪಡಿಸಲು ಹೇಳಿದ್ದರು. ಸ್ವತಃ ಬಿಎಸ್ ಯಡಿಯೂರಪ್ಪನವರೇ ಫೋನ್ ಮಾಡಿದ್ದರು. ನಾನಾಗಿ ಎಂದೂ ಬಿಜೆಪಿ ಟಿಕೆಟ್ ಬಯಸಲಿಲ್ಲ. ಅವರೇ ಕರೆದುಕೊಟ್ಟಿದ್ದರು. ಈ ಬಾರಿ ಅವರೇ ಕರೆದು ಕೊನೆಗೆ ಕೊಡಲಿಲ್ಲ ಎಂದು ವಿಜಯ್ ಸಂಕೇಶ್ವರ ಬಿಜೆಪಿ ಮೇಲೆ ತಮ್ಮ ಮುನಿಸು ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ