Publish Date: Mon, 12 Mar 2018 (10:11 IST)
Updated Date: Tue, 13 Mar 2018 (16:56 IST)
ಬೆಂಗಳೂರು: ಈ ಬಾರಿ ರಾಜ್ಯ ಸಭೆ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿಯಲಿರುವ ರಾಜೀವ್ ಚಂದ್ರಶೇಖರ್ ಕೊನೆಗೂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಕಳೆದ ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ರಾಜೀವ್ ಚಂದ್ರಶೇಖರ್ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಮೂಲತಃ ಕೇರಳದವರಾದ ರಾಜೀವ್ ಚಂದ್ರಶೇಖರ್ ಏಷಿಯಾನೆಟ್ ನೆಟ್ ವರ್ಕ್ ವಾಹಿನಿಯ ಮುಖ್ಯಸ್ಥ. ಮುಂದೆ ಕೇರಳದಲ್ಲಿ ಚುನಾವಣೆಯಾಗುವಾಗ ಏಷಿಯಾನೆಟ್ ಚಾನೆಲ್ ಮೂಲಕ ಬಿಜೆಪಿ ಪರ ಅಲೆ ಸೃಷ್ಟಿಸಲು ತಂತ್ರ ರೂಪಿಸಲಾಗಿದೆಯೇ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ