Webdunia - Bharat's app for daily news and videos

Install App

ಮಹಿಳಾ ಮೀಸಲಾತಿ ಜಾರಿಗೊಳಿಸಿದ ಮೋದಿ ಮಾಸ್ಟರ್ ಪ್ಲ್ಯಾನ್ ಏನಿತ್ತು ಎಂದು ರಿವೀಲ್ ಮಾಡಿದ ಬಿಜೆಪಿ

ಕೃಷ್ಣವೇಣಿ ಕೆ
ಸೋಮವಾರ, 20 ಏಪ್ರಿಲ್ 2026 (17:21 IST)
ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತಂದು ಪ್ರಧಾನಿ ಮೋದಿ ಮಾಸ್ಟರ್ ಪ್ಲ್ಯಾನ್ ಏನಿತ್ತು ಎಂಬುದನ್ನು ರಾಜ್ಯ ಬಿಜೆಪಿ ಘಟಕ ರಿವೀಲ್ ಮಾಡಿದೆ.

ಮೊನ್ನೆಯಷ್ಟೇ ಲೋಕಸಭೆಯಲ್ಲಿ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗೆ ಸ್ಪರ್ಧಿಸಲು ಶೇ.33 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸಲಾಗಿತ್ತು. ಆದರೆ ವಿಪಕ್ಷಗಳು ಇದನ್ನು ವಿರೋಧಿಸಿ ಮತ ಹಾಕಿದ್ದವು. ಪರಿಣಾಮ ಸಂಸತ್ ನಲ್ಲಿ ಬಹುಮತ ಸಿಗದೇ ಮಸೂದೆ ಬಿದ್ದು ಹೋಗಿತ್ತು.

ಆದರೆ ಈ ಮಸೂದೆ ಜಾರಿಗೆ ತರುವ ಮೋದಿ ಮಾಸ್ಟರ್ ಪ್ಲ್ಯಾನ್ ಬೇರೆಯೇ ಇತ್ತು ಎಂದು ಬಿಜೆಪಿ ಹೇಳಿಕೊಂಡಿದೆ. ‘ಯಾವುದೇ ರಾಜ್ಯಗಳ ಹಕ್ಕುಗಳೊಂದಿಗೆ ರಾಜಿ ಮಾಡಿಕೊಳ್ಳದೆ ನಾರಿ ಶಕ್ತಿ ವಂದನಾ ಅಧಿನಿಯಮವು ಲೋಕಸಭಾ ಸ್ಥಾನಗಳನ್ನು 543 ರಿಂದ 815ಕ್ಕೆ ವಿಸ್ತರಿಸಿ 33% ಮಹಿಳಾ ಮೀಸಲಾತಿಯನ್ನು ಹೆಚ್ಚುವರಿ ಸ್ಥಾನಗಳ ಮೂಲಕ ನೀಡುವುದನ್ನು ಪ್ರಸ್ತಾಪಿಸಿತ್ತು.

ಯಾವುದೇ ಹಾಲಿ ಸಂಸದರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುತ್ತಿರಲಿಲ್ಲ. ಯಾವುದೇ ರಾಜ್ಯಗಳು ತಮ್ಮ ಪಾಲು ಕಳೆದುಕೊಳ್ಳುತ್ತಿರಲಿಲ್ಲ, ಹೆಚ್ಚು ಧ್ವನಿಗಳು ಸೇರಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲಿದ್ದವು. ಆದರೂ ಪ್ರತಿಪಕ್ಷಗಳು ಮಹಿಳೆಯರಿಗೆ ಅವರ ಹಕ್ಕು ನೀಡುವುದನ್ನು ಮತ್ತೊಮ್ಮೆ ವಿರೋಧಿಸಿವೆ’ ಎಂದು ಬಿಜೆಪಿ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೈದರಾಬಾದ್ ಬಳಿ ವೇಗವಾಗಿ ಬಂದ ಬಸ್ ಪೆಟ್ರೋಲ್ ಬಂಕ್‌ಗೆ ಡಿಕ್ಕಿ, ಭಾರಿ ದುರಂತ, Video

ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸಲು ನಮಗೊಂದು ಅವಕಾಶ ಕೊಡಿ: ಬಿವೈ ವಿಜಯೇಂದ್ರ

18th BRICS: ರಾಷ್ಟ್ರ ರಾಜಧಾನಿಯಲ್ಲಿ ನಿಯೋಜನೆಗೊಂಡ ಪೊಲೀಸರೆಷ್ಟು ಗೊತ್ತಾ

ನದಿ ನೀರನ್ನು ಕಲುಷಿತಗೊಳಿಸಿದ್ರೆ ಕಾರ್ಖಾನೆಗಳಿಗೆ ಬೀಗ ಗ್ಯಾರಂಟಿ: ರಾಮಲಿಂಗಾರೆಡ್ಡಿ ವಾರ್ನಿಂಗ್

ಹಣ ಕಲೆಕ್ಷನ್ ವಿಚಾರಕ್ಕೆ ಕೈ ಕೈ ಮಿಲಾಯಿಸಿಕೊಂಡ ಎರಡು ಗುಂಪಿನ ತೃತೀಯ ಲಿಂಗಿಗಳು, Video

ಮುಂದಿನ ಸುದ್ದಿ
Show comments