Karkala: ಮೊಬೈಲ್ ಚಾರ್ಜ್ ಗಿಟ್ಟು ಮಲಗಿದ್ದ ಕುಟುಂಬ, ಇಡೀ ಮನೆಯೇ ಸುಟ್ಟೋಯ್ತು

Krishnaveni K
ಮಂಗಳವಾರ, 18 ಫೆಬ್ರವರಿ 2025 (10:44 IST)
ಕಾರ್ಕಳ: ಮೊಬೈಲ್ ಚಾರ್ಜ್ ಗಿಟ್ಟು ರಾತ್ರಿ ಮಲಗುವ ಅಭ್ಯಾಸವಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಈ ರೀತಿ ಮಾಡಿ ಇಡೀ ಮನೆಯೇ ಸುಟ್ಟು ಹೋದ ಘಟನೆ ಕಾರ್ಕಳ ತಾಲೂಕಿನ ತೆಳ್ಳಾರು ರಸ್ತೆಯಲ್ಲಿ ನಡೆದಿದೆ.

ಕಿಶೋರ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ರಾತ್ರಿ ಮಲಗುವ ಮುನ್ನ ಸೋಫಾ ಮೇಲೆ ಮೊಬೈಲ್ ಇಟ್ಟು ಚಾರ್ಜ್ ಮಾಡಲಿಟ್ಟಿದ್ದರು. ಇದ್ದಕ್ಕಿದ್ದಂತೆ ಮೊಬೈಲ್ ಸ್ಪೋಟಗೊಂಡಿದೆ.

ಕಿಶೋರ್ ಕುಮಾರ್ ಅವರದ್ದು ಎರಡು ಅಂತಸ್ತುಗಳ ಆರು ಕೊಠಡಿಗಳ ಮನೆಯಾಗಿದೆ. ಒಂದು ಚಿಕ್ಕ ಮೊಬೈಲ್ ಸ್ಪೋಟಗೊಂಡ ತೀವ್ರತೆ ಎಷ್ಟಿತ್ತೆಂದರೆ ಇಡೀ ಮನೆಯೇ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿರುವ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿದೆ.

ತಕ್ಷಣವೇ ಅಗ್ನಿಶಾಮಕ ದಳದವರನ್ನು ಕರೆಸಿ ಬೆಂಕಿ ನಂದಿಸುವ ಕೆಲಸ ಮಾಡಲಾಯಿತು. ಮನೆಯಲ್ಲಿ ಏರ್ ಕಂಡೀಷನ್ ಕೂಡಾ ಆನ್ ಆಗಿತ್ತು. ಹೀಗಾಗಿ ಬೆಂಕಿ ಹರಡಿರಬಹುದು ಎಂದು ಶಂಕಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ಈಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ದಾರುಣ ಸಾವು

ಖಮೇನಿ ಹತ್ಯೆಯನ್ನು ಖಂಡಿಸಿ, ಟ್ರಂಪ್ ವಿರುದ್ಧ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ

ಖಮೇನಿ ಹತ್ಯೆ ಖಂಡಿಸಿ ಇಸ್ರೇಲ್‌ ಯುಎಸ್ ವಿರುದ್ಧ ಗುಡುಗಿದ ರಷ್ಯಾ ಅಧ್ಯಕ್ಚ ಪುಟಿನ್

ಖಮೇನಿ ಹತ್ಯೆಗೆ ಇದೀಗ ಪ್ರತೀಕಾರ ತೀರಿಸಿಕೊಳ್ಳುವ ಸಮಯ: ಇರಾನ್ ಅಧ್ಯಕ್ಷ

ಲಕ್ಷಾಂತರ ಮಂದಿ ಕಾರ್ಯಕರ್ತರು ನೋವಿನಲ್ಲೇ ದಿನ ಕಳೆಯುತ್ತಿದ್ದಾರೆ: ಈಶ್ವರಪ್

ಮುಂದಿನ ಸುದ್ದಿ
Show comments