Select Your Language

Notifications

webdunia
webdunia
webdunia
webdunia

ಶಾಸಕ ಉಮೇಶ್ ಕತ್ತಿ ವಿರುದ್ಧ ಕರವೇ ಗರಂ

ಶಾಸಕ ಉಮೇಶ್ ಕತ್ತಿ ವಿರುದ್ಧ ಕರವೇ ಗರಂ
ರಾಮನಗರ , ಗುರುವಾರ, 2 ಆಗಸ್ಟ್ 2018 (16:47 IST)
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎತ್ತಿರುವ ಮಾಜಿ ಸಚಿವ ಹಾಗೂ ಶಾಸಕ ಉಮೇಶ್ ಕತ್ತಿ ವಿರುದ್ಧ ಕರವೇ ಕಾರ್ಯಕರ್ತರು ರಾಮನಗರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ರು.

ಚನ್ನಪಟ್ಟಣದ ಗಾಂಧಿ ಭವನದಿಂದ ಹೊರಟ ಪ್ರತಿಭಟನಕಾರರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ಮೂಲಕ ಸಾಗಿ ಖಾಸಗಿ ಬಸ್ ನಿಲ್ದಾಣದ ಎದ್ರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ರು.

ಪ್ರತ್ಯೇಕ ರಾಜ್ಯದ ಕೂಗು ಎತ್ತಿರುವ ಉಮೇಶ್ ಕತ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ನಮ್ಮ ರಾಜ್ಯ ಒಂದೇ ಅದು ಕರ್ನಾಟಕ ಯಾವುದೇ ಕಾರಣಕ್ಕೂ ರಾಜ್ಯ ಒಡೆಯಲು ನಾವು ಬಿಡುವುದಿಲ್ಲಾ. ಅಖಂಡ ಕರ್ನಾಟಕ ಅಭಿವೃದ್ಧಿಯೇ ನಮ್ಮ ಗುರಿ ಎಂದು ಘೋಷಣೆ ಕೂಗುವ ಮೂಲಕ ಅಖಂಡ ಕರ್ನಾಟಕದ ಪರ ಜೈಕಾರ ಕೂಗಿದರು.



 

Share this Story:

Follow Webdunia kannada

ಮುಂದಿನ ಸುದ್ದಿ

ದೊರಕದ ಜಾತಿ ಪ್ರಮಾಣ ಪತ್ರ: ರಾಷ್ಟ್ರಪತಿಗೆ ದಯಾಮರಣ ಕೋರಿದ ಅನಾಥ ಯುವಕ!