Publish Date: Thu, 07 Jun 2018 (17:29 IST)
Updated Date: Thu, 07 Jun 2018 (17:31 IST)
ಕಾವೇರಿ ನದಿ ನೀರು ಹಂಚಿಕೆ ಕುರಿತು ನಟ ರಜನಿಕಾಂತ್ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ರಜನಿ ಅಭಿನಯದ ಕಾಲಾ ಚಿತ್ರ ಪ್ರದರ್ಶನಕ್ಕೆ ಅವಕಾಶವಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಪ್ರತಿಭಟನಾಕಾರರ ಎಚ್ಚರಿಕೆಗೆ ಮಣಿದ ಚಲನಚಿತ್ರರಂಗದ ಮಾಲೀಕರು ಕಾಲಾ ಚಿತ್ರ ಪ್ರದರ್ಶನಕ್ಕೆ ನಿರಾಸಕ್ತಿ ತೋರಿದ್ದಾರೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕೂಡಾ ಕಾಲಾ ಪ್ರದರ್ಶನವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಪ್ರದರ್ಶನಕ್ಕೆ ಮುಂದಾದರೂ ಭದ್ರತಾ ಸಮಸ್ಯೆ ಉಂಟಾಗಬಹುದು. ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂಬ ಮುನ್ಸೂಚನೆ ಅರಿತು ಸ್ವಯಂ ಪ್ರೇರಣೆಯಿಂದ ಚಿತ್ರ ಪ್ರದರ್ಶಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇಂದು ಬಿಡುಗಡೆಯಾಗುತ್ತಿರುವ ರಜನಿಕಾಂತ್ ಅಭಿನಯದ ತಮಿಳು ಚಿತ್ರ ಕಾಲಾ, ಮೈಸೂರಿನ ಡಿ.ಆರ್.ಸಿ., ಐನಾಕ್ಸ್, ಕೆಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ನಡೆಯಬೇಕಿತ್ತು. ಆದರೆ, ಪ್ರತಿಭಟನೆಗಳಿಂದಾಗಿ ಚಿತ್ರ ಪ್ರದರ್ಶನ ರದ್ದುಗೊಂಡಿದೆ.