Select Your Language

Notifications

webdunia
webdunia
webdunia
Wednesday, 16 April 2025
webdunia

ಕನ್ನಡ ಸಾಹಿತ್ಯ ಸಮ್ಮೇಳನ ; ಉಚಿತ ಸಿನಿಮಾ ಪ್ರದರ್ಶನ

ಸಾಹಿತ್ಯ ಸಮ್ಮೇಳನ
ಕಲಬುರಗಿ , ಶನಿವಾರ, 1 ಫೆಬ್ರವರಿ 2020 (20:52 IST)
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಿನಿಮಾಗಳನ್ನು ಉಚಿತವಾಗಿ ಪ್ರದರ್ಶನ ಮಾಡಲಾಗ್ತಿದೆ.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಿಥಿ, ನಾತಿಚರಾಮಿ, ಮುಕಜ್ಜಿಯ ಕನಸುಗಳು, ಅಮ್ಮಚ್ಚಿ ಒಂದು ನೆನಪು, ಒಂದಲ್ಲ ಎರಡಲ್ಲ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು, ಹಸಿರು ರಿಬ್ಬನ್, ಡಿಸೆಂಬರ್-1 ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಈ ಪ್ರದರ್ಶನವು ಸಂಪೂರ್ಣ ಉಚಿತವಿದ್ದು, ಕಲಬುರಗಿ ಜಿಲ್ಲೆಯ ಜನತೆ ವೀಕ್ಷಿಸುವಂತೆ ಕರೆ ನೀಡಲಾಗಿದೆ.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕಲಬುರಗಿ ನಗರದ ಜಿಲ್ಲಾ ರಂಗಮಂದಿರದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರಗಳ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ.  ಫೆ.4ರ ವರೆಗೆ ಈ ಪ್ರದರ್ಶನ ನಡೆಯಲಿದ್ದು, ಪ್ರತಿದಿನ ಸಂಜೆ 4 ಗಂಟೆ ಹಾಗೂ 6.30 ಕ್ಕೆ ಪ್ರದರ್ಶನ ನಡೆಯಲಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಸಾಹಿತ್ಯ ಸಮ್ಮೇಳನ: ವಿಶೇಷ ಬಸ್ ಟಿಕೆಟ್ ಕೇವಲ 5 ರೂ.