Publish Date: Sat, 01 Feb 2020 (20:27 IST)
Updated Date: Sat, 01 Feb 2020 (20:29 IST)
ಕಲಬುರಗಿಯಲ್ಲಿ ಫೆಬ್ರವರಿ 5 ರಿಂದ 7 ರವರೆಗೆ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಸಮ್ಮೇಳನ ಹಿನ್ನೆಲೆಯಲ್ಲಿ ಇದೇ ಫೆಬ್ರವರಿ 5 ರಿಂದ 7ರವರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸಮ್ಮೇಳನಕ್ಕೆ ಆಗಮಿಸುವ ಸಾರ್ವಜನಿಕರು, ಪ್ರಯಾಣಿಕರಿಗಾಗಿ ವಿಶೇಷ ಸಾರಿಗೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಕಲಬುರಗಿ ನಗರದ ಎಲ್ಲಾ ಬಡಾವಣೆಗಳಿಂದ ಸಮ್ಮೇಳನ ನಡೆಯುವ ಸ್ಥಳವಾದ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ವಿಶೇಷ ಮತ್ತು ಹೆಚ್ಚುವರಿ ನಗರ ಸಾರಿಗೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.
ಕಲಬುರಗಿ ನಗರದಲ್ಲಿ ಸಂಚರಿಸುವ ಎಲ್ಲಾ ನಗರ ಸಾರಿಗೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಯಾವುದೇ ಸ್ಥಳದಲ್ಲಿ ಹತ್ತಿ ಇಳಿದರೂ 5. ರೂ. ಪಾವತಿಸಬೇಕಷ್ಟೇ.