Select Your Language

Notifications

webdunia
webdunia
webdunia
webdunia

ಈಗೇನು ಕನ್ನಡಿಗರಿಗೆ ಮೀಸಲಾತಿ ನೀಡ್ತಿರೋ ಇಲ್ವೋ: ಸರ್ಕಾರಕ್ಕೆ ಗಡುವು ನೀಡಿದ ನಾರಾಯಣ ಗೌಡ

Narayana Gowda

Krishnaveni K

ಬೆಂಗಳೂರು , ಶನಿವಾರ, 20 ಜುಲೈ 2024 (16:07 IST)
ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿದೇಯಕ ಮಂಡಿಸಿದ್ದ ರಾಜ್ಯ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಅತ್ತ ಉದ್ಯಮಿಗಳು ಇತ್ತ ಕನ್ನಡ ಹೋರಾಟಗಾರರ ನಡುವೆ ಸರ್ಕಾರ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.

ಕನ್ನಡಿಗರಿಗೆ ಮೀಸಲಾತಿ ವಿದೇಯಕ ಮಂಡಿಸಿ ಬೀಗಿದ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಉದ್ಯಮಿಗಳಿಂದ ಆಕ್ರೋಶ ಎದುರಾಗಿತ್ತು. ಇದರಿಂದ ಇಲ್ಲಿ ಉದ್ಯಮ ನಡೆಸುವ ಉದ್ದಿಮೆದಾರರಿಗೆ ತೊಂದರೆಯಾಗಲಿದೆ. ಕೌಶಲ್ಯಭರಿತ ಉದ್ಯೋಗಗಳು ಸಿಗಲ್ಲ. ಇಂತಹ ಇಕ್ಕಟ್ಟಿನಲ್ಲಿ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ ಎಂದಾಗ ಸರ್ಕಾರ ಹಿಂಜರಿಯಿತು.

ಒಂದು ವೇಳೆ ಉದ್ಯಮ ಸಂಸ್ಥೆಗಳು ಕರ್ನಾಟಕದಲ್ಲಿ ಹೂಡಿಕೆ ಮಾಡದೇ ಹೋದರೆ ಅದು ಇಲ್ಲಿನ ಆರ್ಥಿಕತೆ ಮೇಲೆ ಹೊಡೆತ ತರಲಿದೆ. ಹೀಗಾಗಿ ರಾಜ್ಯ ಸರ್ಕಾರ ವಿದೇಯಕಕ್ಕೆ ತಾತ್ಕಾಲಿಕ ತಡೆ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೊಮ್ಮೆ ಸಚಿವ ಸಂಪುಟದಲ್ಲಿ ಚರ್ಚಿಸಿತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಆದರೆ ಸರ್ಕಾರ ಈ ವಿದೇಯಕಕ್ಕೆ ತಡೆ ನೀಡುತ್ತಿದ್ದಂತೇ ಇತ್ತ ಕನ್ನಡ ಸಂಘಟನೆಗಳು ರೊಚ್ಚಿಗೆದ್ದಿವೆ. ಕರವೇ ನಾಯಕ ನಾರಾಯಣಗೌಡ ಈಗೇನು ಕನ್ನಡಿಗರಿಗೆ ಮೀಸಲಾತಿ ಜಾರಿಗೆ ತರುತ್ತೀರೋ ಇಲ್ವೋ? ಇಲ್ಲಾಂದ್ರೆ ನಾವು ಕರ್ನಾಟಕ ಬಂದ್ ಗೂ ತಯಾರಿದ್ದೇವೆ. ಇದರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಉದ್ಯಮಗಳ ಪ್ರಭಾವಕ್ಕೆ ಒಳಗಾಗಬಾರದು. ಇಲ್ಲಿನ ಕನ್ನಡಿಗರಿಗೆ ಅನ್ಯಾಯ ಮಾಡಬಾರದು. ಅಂತಹ ಸಂದರ್ಭ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧ. ಇದಕ್ಕಾಗಿ ಸರ್ಕಾರಕ್ಕೆ 15 ದಿನದ ಗಡುವು ನೀಡುತ್ತೇವೆ. ಅಷ್ಟರೊಳಗೆ ತೀರ್ಮಾನವಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ 40 ವರ್ಷದಿಂದ ಹಾಕಿಕೊಂಡಿದ್ದ ಮುಖವಾಡ ಕಳಚಿದೆ: ಆರ್‌ ಅಶೋಕ್