Webdunia - Bharat's app for daily news and videos

Install App

ಕಲಬುರಗಿ: ರೌಡಿಶೀಟರ್‌ನ್ನು ಹತ್ಯೆ ಮಾಡಿ ರೈಲ್ವೆ ಹಳಿ ಮೇಲೆ ಎಸೆದ ದುಷ್ಕರ್ಮಿಗಳು

Sampriya
ಮಂಗಳವಾರ, 12 ನವೆಂಬರ್ 2024 (15:39 IST)
ಕಲಬುರಗಿ: ರೌಡಿಶೀಟರ್‌ಅನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಬರ್ಬರವಾಗಿ ಹತ್ಯೆ ಮಾಡಿ, ರೈಲ್ವೆ ಹಳಿ ಬಳಿ ಎಸೆದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಕಲಬುರಗಿ (ಜಿಲ್ಲೆಯ ಪಟ್ಟಣ ಗ್ರಾಮದಲ್ಲಿ ನಡೆದಿದೆ. ಮೃತ ರೌಡಿಶೀಟರ್‌ ಅನ್ನು ಸೋಮು ತಾಳಿಕೋಟಿ (40)ಎಂದು ಗುರುತಿಸಲಾಗಿದೆ.

ಸೋಮುನನ್ನು  ಕಲಬುರಗಿಯ ಪಟ್ಟಣ ಗ್ರಾಮದಲ್ಲಿ ಬರ್ಬರವಾಗಿ ಹತ್ಯೆ ಮಾಡಿ ನಂತರ ದೇಹವನ್ನು ಆಳಂದ ರಸ್ತೆಯ ರೈಲ್ವೆ ಹಳಿ ಬಳಿ ಶವ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇನ್ನೂ ಪ್ರಾಥಮಿಕ ತನಿಖೆಯಲ್ಲಿ ಈ ಹತ್ಯೆಗೆ ಹಳೆಯ ವೈಷಮ್ಯವೇ ಕಾರಣ ಎಂದು ತಿಳಿದುಬಂದಿದೆ.

ಕೆಲ ತಿಂಗಳ ಹಿಂದೆ ಸೋಮು ಪಟ್ಟಣ ಗ್ರಾಮದ ಡಾಬಾ ಮಾಲೀಕನ ಜೊತೆ ಈತ ಜಗಳವಾಡಿದ್ದನು. ಅಲ್ಲದೆ ಸೋಮು ಮತ್ತು ಆತನ ಸಂಗಡಿಗರು ಡಾಬಾ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಹೀಗಾಗಿ ಹಳೆಯ ವೈಷಮ್ಯಕ್ಕಯೇ ಈ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ವಾರದ ಹವಾಮಾನ ಬದಲಾವಣೆಯನ್ನು ತಪ್ಪದೇ ಗಮನಿಸಿ

Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ

ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ಮುಂದಿನ ಸುದ್ದಿ
Show comments