Select Your Language

Notifications

webdunia
webdunia
webdunia
Saturday, 12 April 2025
webdunia

ಕಲಬುರ್ಗಿ: ಮನೆಯಲ್ಲಿ ಒಂಟಿಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರ

Kalaburagi District

Sampriya

ಕಲಬುರಗಿ , ಸೋಮವಾರ, 7 ಏಪ್ರಿಲ್ 2025 (16:15 IST)
ಕಲಬುರಗಿ: ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ಮನೆಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅತಿಥಿ ಶಿಕ್ಷಕನನ್ನು ಪೊಲೀಸರು ಬಂದಿಸಿದ್ದಾರೆ. ಬಂಧಿತ ಶಿಕ್ಷಕನನ್ನು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿವರಾಜ ಹಣಮಂತ (32) ಎಮದು ಗುರುತಿಸಲಾಗಿದೆ.

8ನೇ ತರಗತಿ ಓದುತ್ತಿದ್ದ 14 ವರ್ಷದ ಬಾಲಕಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ. ಶಿಕ್ಷಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ಪೋಷಕರು ಯುಗಾದಿ ಹಬ್ಬಕ್ಕೆಂದು ತಮ್ಮ ತವರು ಮನೆಗೆ ಹೋಗಿದ್ದಾರೆ. ಪರೀಕ್ಷೆಯ ಹಿನ್ನೆಲೆ ಸಂತ್ರಸ್ತೆ ಬಾಲಕಿ ಮನೆಯಲ್ಲಿಯೇ ಉಳಿದಿದ್ದಳು.

ಅದೇ ಗ್ರಾಮದಲ್ಲಿನ ಅಜ್ಜಿಯ ಮನೆಗೆ ಹೋಗಿದ್ದ ಬಾಲಕಿ, ಸಂಜೆ ವಾಪಸ್ ಬಂದು ಮನೆಯಲ್ಲಿ ಸ್ನೇಹಿತರ ಜತೆಗೆ ಟಿ.ವಿ. ನೋಡುತ್ತಿದ್ದಳು. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಶಿವರಾಜ, ಮನೆಗೆ ನುಗ್ಗಿದನು. ಇದರಿಂದ ಬಾಲಕಿಯ ಸ್ನೇಹಿತರು ಹೆದರಿ ಹೊರಗೆ ಓಡಿಹೋದರು ಎಂದು ಹೇಳಿದ್ದಾರೆ.

ಈ ವೇಳೆ ಬಾಲಕಿ ಆರೋಪಿಯಲ್ಲಿ ಮನೆಯಲ್ಲಿ ತಂದೆ ತಾಯಿ ಇಲ್ಲದ ವೇಳೆ ಯಾಕೆ ಬಂದಿದ್ದು ಎಂದು ಕೇಳಿದ್ದಾಳೆ.  ನಾನು ನಿನ್ನ ಪ್ರೀತಿಸುತ್ತೇನೆ ಎಂದು ಪುಸುಲಾಯಿಸಿ ಮತ್ತು ಹೆದರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದನು. ಪ್ರಜ್ಞೆ ತಪ್ಪಿ ಬಿದ್ದಿದ್ದ ಬಾಲಕಿಯನ್ನು ಪೋಷಕರು ಕಲಬುರಗಿ ನಗರದ ಜಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಎಚ್ಚರವಾದಾಗ ನಡೆದ ಕೃತ್ಯವನ್ನು ಪೋಷಕರಿಗೆ ತಿಳಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Rahul Gandhi: ಕಾಂಗ್ರೆಸ್ ಜಾತಿ ಗಣತಿ ಮೂಲಕ ದೇಶದ ಎಕ್ಸ್ ರೇ ಮಾಡಲಿದೆ: ರಾಹುಲ್ ಗಾಂಧಿ