Select Your Language

Notifications

webdunia
webdunia
webdunia
webdunia

ಕಲಬುರಗಿ: ಅಧಿವೇಶನದಲ್ಲಿನ ಚರ್ಚೆ ನಡೆಯುತ್ತಿರುವಾಗಲೇ ಮತ್ತೊಂದು ಬಾಣಂತಿ ಸಾವು

Kalburgi Maternal Case, Bhagyashree No More, Belgavi Winter Session

Sampriya

ಕಲಬುರಗಿ , ಮಂಗಳವಾರ, 17 ಡಿಸೆಂಬರ್ 2024 (16:53 IST)
ಕಲಬುರಗಿ: ರಾಯಚೂರು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ಸರಣಿ ಬಾಣಂತಿಯರ ಸಾವು ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಕಲಬುರಗಿಯಲ್ಲಿ ಮತ್ತೋರ್ವ ಬಾಣಂತಿ ಸಾವಾಗಿದೆ.

ಮೃತ ಬಾಣಂತಿಯನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಟಕಿ ಗ್ರಾಮದ ನಿವಾಸಿ ಭಾಗ್ಯಶ್ರೀ(22) ಎಂದು ಗುರುತಿಸಲಾಗುದೆ. ಮಗುವಿಗೆ ಜನ್ಮ ನೀಡಿ ಬಳಿಕ  ಭಾಗಶ್ರೀ ಸಾವನ್ನಪ್ಪಿದ್ದಾರೆ.

ಆಳಂದ ತಾಲೂಕಿನ ಮಟಕಿ ಗ್ರಾಮದ ನಿವಾಸಿ ಭಾಗ್ಯಶ್ರೀ(22) ಅವರು ಹೆರಿಗೆಗಾಗಿ ನಿನ್ನೆ (ಡಿಸೆಂಬರ್ 17) ಮಧ್ಯಾಹ್ನ ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಇಂದು(ಡಿಸೆಂಬರ್ 17) ಬೆಳಗ್ಗೆ 8 ಗಂಟೆಗೆ ಗಂಡು ಮಗುವಿಗೆ ಜನ್ಮನೀಡಿದ್ದಾಳೆ.

ನಂತರ ಭಾಗ್ಯಶ್ರೀ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಅಫಜಲಪುರ ಸರ್ಕಾರಿ ಆಸ್ಪತ್ರೆ ವೈದ್ಯರು, ಜಿಮ್ಸ್​ಗೆ ರವಾನಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಭಾಗ್ಯಶ್ರೀ ಗುಲಬರ್ಗಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಅತಿಯಾದ ರಕ್ತಸ್ರಾವ, ಲೋ ಬಿಪಿಯಿಂದಾಗಿ ಭಾಗ್ಯಶ್ರೀ ಅವರನ್ನು ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಜಿಮ್ಸ್ ಗೆ ಕರೆದುಕೊಂಡು ಬಂದು ಅಡ್ಮಿಟ್ ಮಾಡಲಾಗಿದ್ದು, ಎರಡು ಯುನಿಟ್ ರಕ್ತ ಸಹ ಏರಿಸಲಾಗಿದೆ. ಆದರೂ ಲೋ ಬಿಪಿಯಿಂದ ಮೃತಟ್ಟಿದ್ದಾಳೆ ಎಂದು ತಿಳಿದುಬಂದಿದೆ. ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಜಿಮ್ಸ್ ಆಸ್ಪತ್ರೆ ವೈದ್ಯರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಘಟನೆಗಳ ಬೇಡಿಕೆ ಕುರಿತು ಸದನದಲ್ಲಿ ಪ್ರಸ್ತಾಪ: ವಿಜಯೇಂದ್ರ