Select Your Language

Notifications

webdunia
webdunia
webdunia
webdunia

ಲಾರಿ ಪಲ್ಟಿ: ಚೀಲದಡಿ ಸಿಲುಕಿ ಪಿಡಬ್ಲ್ಯುಡಿಯ ಮೂವರು ಯುವ ಎಂಜಿನಿಯರ್‌ಗಳು ಸ್ಥಳದಲ್ಲೇ ಸಾವು

ಲಾರಿ ಪಲ್ಟಿ: ಚೀಲದಡಿ ಸಿಲುಕಿ ಪಿಡಬ್ಲ್ಯುಡಿಯ ಮೂವರು ಯುವ ಎಂಜಿನಿಯರ್‌ಗಳು ಸ್ಥಳದಲ್ಲೇ ಸಾವು

Sampriya

ರಾಯಚೂರು , ಮಂಗಳವಾರ, 17 ಡಿಸೆಂಬರ್ 2024 (14:11 IST)
ರಾಯಚೂರು:  ಸಿಂಧನೂರಿನ ಪಿಡಬ್ಲ್ಯೂಡಿ ಸಮೀಪ ಡಾಲರ್ಸ್ ಕಾಲೋನಿ ಕ್ರಾಸ್ ಬಳಿ ಲಾರಿ ಪಲ್ಟಿಯಾಗಿ ರಸ್ತೆ ಬದಿಯಲ್ಲಿ ನಿಂತವರ ಮೇಲೆ ಚೀಲಗಳು ಬಿದ್ದು, ಮೂವರು ಯುವ ಎಂಜಿನಿಯರ್‌ಗಳು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಲೋಕೋಪಯೋಗಿ ಇಲಾಖೆಯ ಜವಳಗೇರಾ ಉಪವಿಭಾಗದ  ಕಿರಿಯ ಎಂಜಿನಿಯರ್ ಗಳಾದ ಮಲ್ಲಿಕಾರ್ಜುನ (29), ಶಿವರಾಜು (28) , ಮೆಹಬೂಬ (30) ಎಂಬುವವರು ಮೃತಪಟ್ಟವರು. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಶಿವರಾಜ್ ಹಾಗೂ ಮಲ್ಲಿಕಾರ್ಜುನ ಲಿಂಗಸುಗೂರು ತಾಲ್ಲೂಕಿನ ಮಹೆಬೂಬ್ ಸಿಂಧನೂರು ಪಟ್ಟಣದವರು ಎಂದು ತಿಳಿದು ಬಂದಿದೆ.

ಜವಳಗೇರಾದಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ಸಿಂಧನೂರಿಗೆ ಬಂದು, ಪಿಡಬ್ಲ್ಯೂಡಿ ಕ್ಯಾಂಪ್​​​ ನ ಡಾಲರ್ಸ್ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಬಳಿ ಬೈಕ್​ ನಿಲ್ಲಿಸಿಕೊಂಡು ಮೂವರು ಮಾತನಾಡುತ್ತಾ ನಿಂತಿದ್ದರು.

ಇದೇ ವೇಳೆ, ರಾಯಚೂರಿನಿಂದ ಸಿಂಧನೂರು ಕಡೆ ಬರುತ್ತಿದ್ದ ಭತ್ತದ ಹೊಟ್ಟಿನ ಚೀಲಗಳನ್ನು ತುಂಬಿಕೊಂಡು ವೇಗವಾಗಿ ಬಂದ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ರಸ್ತೆ ಬದಿ ನಿಂತವರ ಮೇಲೆಯೇ ಚೀಲಗಳು ಉರುಳಿ ಬಿದ್ದಿದ್ದು, ಅದರಡಿ ಸಿಲುಕಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನೆ ಪ್ಯಾಲೆಸ್ತೀನ್ ಪರ, ಇಂದು ಬಾಂಗ್ಲಾದೇಶ ಹಿಂದೂ ಪರ ಪ್ರಿಯಾಂಕ ಗಾಂಧಿ ವಾದ್ರಾ ಹೋರಾಟ