ಹೋಟೆಲ್ ನಲ್ಲಿ ಊಟ ಮಾಡಿದವ್ರು ಸೇರಿದ್ರು ಕೈಲಾಸ

Webdunia
ಮಂಗಳವಾರ, 27 ಆಗಸ್ಟ್ 2019 (16:55 IST)
ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ಬೇಗ ಮನೆಗೆ ಹೋಗುವ ಅವಸರದಲ್ಲಿದ್ದವರು ಸಾವನ್ನಪ್ಪಿದ ಮನಕಲುಕುವ ಘಟನೆ ನಡೆದಿದೆ.

ರಾಂಗ್ ರೂಟ್ ನಲ್ಲಿ ಕಾರು ಚಲಾಯಿಸಿದ ಕುಟುಂಬಕ್ಕೆ ಟಿಪ್ಪರ್ ಲಾರಿ ಯಮರಾಯನ ರೂಪದಲ್ಲಿ ಆಗಮಿಸಿದ್ದು, ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದಿದೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿ ಸಾವಿನ ದವಡೆಯಲ್ಲಿ ಹೋರಾಟ ನಡೆಸುತ್ತಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರದ ಬುರಗುಂಟೆ ಬಳಿ ನಡೆದಿದೆ.

ತಡರಾತ್ರಿ 2 ಗಂಟೆ ಸುಮಾರಿನಲ್ಲಿ ಟಿಪ್ಪರ್ ಲಾರಿಗೆ - ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಉತ್ತರ ಪ್ರದೇಶ ಮೂಲದ 2 ವರ್ಷದ ಮಗು ಹಾಗೂ ಮೂವರು ಮೃತಪಟ್ಟಿದ್ದಾರೆ. 2 ವರ್ಷದ ಮಗು ಸೇರಿದಂತೆ ಮತ್ತೊಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಅಂಜನಿ ಯಾದವ್ (29), ನೇಹಾ ಯಾದವ್ (28), ಸಂತೋಷ್ (30) ಹಾಗೂ 2 ವರ್ಷದ ಮಗು ದೃವ ಮೃತ ದುರ್ದೈವಿಗಳಾಗಿದ್ದಾರೆ. ಇನ್ನು ಅಪಘಾತದಲ್ಲಿ ಮತ್ತೊಂದು ಮಗು ಸಾನ್ವಿ(2) ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದೆ. ಈ ಮಗುವಿನ ತಂದೆ ಸಂತೋಷ್(29) ಗಂಭೀರ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಮೃತ ಸಂತೋಷ್ ಕುಟುಂಬದ ಜೊತೆ ತನ್ನ ಸ್ನೇಹಿತನ ಕುಟುಂಬವನ್ನು ಕರೆದುಕೊಂಡು ಹೋಟೆಲ್ ಗೆ ಊಟಕ್ಕೆ ತೆರಳಿದ್ದರು. ತಡರಾತ್ರಿ ಸರ್ಜಾಪುರ ಬಳಿಯ ಡಿಎಕ್ಸ್ ಮ್ಯಾಕ್ಸ್ ಅಪಾರ್ಟ್ಮೆಂಟ್'ನ ತಮ್ಮ ಪ್ಲಾಟಿಗೆ ಹೊರಟಿದ್ದರು. ಬುರಗುಂಟೆ ಬಳಿ ಯು ಟರ್ನ್ ತೆಗೆದುಕೊಂಡು ರಾಂಗ್ ರೂಟಿನಲ್ಲಿ ಹೊರಟಿದ್ದಾರೆ. ಈ ಸಂದರ್ಭದಲ್ಲಿ ಎದುರಿಗೆ ಟಿಪ್ಪರ್ ಲಾರಿ ಬಂದಿದ್ದು ನೇರ ಲಾರಿಗೆ ಗುದ್ದಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.  



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೃದಯದ ಆರೋಗ್ಯ ನೋಡಿಕೊಳ್ಳಲು ಸಿಂಪಲ್ ಟ್ರಿಕ್ಸ್ ಹೇಳುತ್ತಾರೆ ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬಿಜೆಪಿ ಮೇಲೆ ಗುತ್ತಿಗೆದಾರರಿಗೆ ಕಮಿಷನ್ ಆರೋಪ ಮಾಡಿದ್ರಿ, ನಿಮ್ದೇನು ಕತೆ: ಆರ್ ಅಶೋಕ್ ಟಾಂಗ್

ಇನ್ಫೋಸಿಸ್ ನವರು ಬೃಹಸ್ಪತಿಗಳಾ ಎಂದ ಸಿದ್ದರಾಮಯ್ಯ: ನಿಮಗಿಂತಲೂ ದೊಡ್ಡ ಕೊಡುಗೆ ನೀಡಿದ್ದಾರೆ ಎಂದ ನೆಟ್ಟಿಗರು

ಪಾಕಿಸ್ತಾನ ದಾಳಿಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟಿಗರ ಸಾವು: ರಶೀದ್ ಖಾನ್ ಆಕ್ರೋಶ

ಮುಂದಿನ ಸುದ್ದಿ
Show comments