Publish Date: Wed, 22 Mar 2023 (20:23 IST)
Updated Date: Wed, 22 Mar 2023 (20:28 IST)
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.ನಂತರ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿದ್ದೇನೆ.ನನ್ನ ಮಗಳು ರಾಜನಂದಿನಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ.ಒಂದು ಅವಕಾಶ ಮಾಡಿಕೊಡಲು ಕೇಳಿದ್ದೇನೆ. ನಾನೂ ಮೂಲತಃ ಕಾಂಗ್ರೆಸ್ ಪಕ್ಷದವನು.ಅನೇಕ ಆಕಾಂಕ್ಷಿಗಳು ಇದ್ದಾರೆ.ಟಿಕೆಟ್ ನೀಡುವ ಮುನ್ನ ಅನೇಕ ವರದಿಗಳು ಇರ್ತಾವೆ.ನಮಗೆ ಅವಕಾಶ ಮಾಡಿಕೊಡಿ ಎಂದು ಖರ್ಗೆಗೆ ಕೇಳಿದ್ದೇನೆ.ಅವರು ಆಲ್ ಇಂಡಿಯಾ ಕಾಂಗ್ರೆಸ್ ಚೆರ್ಮನ್ ಅವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.