Publish Date: Mon, 04 Jul 2022 (14:25 IST)
Updated Date: Mon, 04 Jul 2022 (14:26 IST)
ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್‌ಪಿ ಲೀಡರ್ ಇಬ್ಬರು ನಾಲಾಯಕ್ ಎಂಬ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್ ಅವರು ಏತಕ್ಕೆ ಈ ಪದ ಬಳಸಿದ್ದಾರೆ, ಲಾಯಕ್ಕೋ, ನಾಲಾಯಕ್ಕೋ ನನಗೆ ಗೊತ್ತಿಲ್., ಅವರು ಇಷ್ಟು ದಿನ ಏನು ಮಾಡುತ್ತಿದ್ದರು ಅದನ್ನು ಹೇಳಲಿ ಎಂದರು.
ಕಾಂಗ್ರೆಸ್ ಪಕ್ಷ ಐಸಿಯುನಲ್ಲಿದೆ ಎಂಬ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದ ಅವರು, ನಮ್ಮ ಪಕ್ಷ ಐಸಿಯುನಲ್ಲಿದೆ ಅಂತ ನಮಗೇನು ಅನ್ನಿಸುತ್ತಿಲ್ಲ. ಅವರ ಭಾವನೆಗಳು ಐಸಿಯುನಲ್ಲಿದೆ. ಭಾರತೀಯ ಜನತಾ ಪಾರ್ಟಿಯ ಭಾವನೆಗಳು, ಚಿಂತನೆಗಳು ಐಸಿಯುನಲ್ಲಿದೆ. ಅದು ಅಂತಿಮ ಹಂತಕ್ಕೆ ಬಂದಿದೆ. ಇದಕ್ಕೆ ಜನ 2023, 2024 ರ ಚುನಾವಣೆಯಲ್ಲಿ ತೀರ್ಮಾನ ಮಾಡುತ್ತಾರೆ.