Select Your Language

Notifications

webdunia
webdunia
webdunia
webdunia

ಪುಸ್ತಕ ಖರೀಸಲು ಪೋಷಕರಿಗೆ ಒತ್ತಡ ಹೇರುತ್ತಿರುವ ಖಾಸಗಿ ಶಾಲೆಗಳು

ಪುಸ್ತಕ ಖರೀಸಲು ಪೋಷಕರಿಗೆ ಒತ್ತಡ ಹೇರುತ್ತಿರುವ ಖಾಸಗಿ ಶಾಲೆಗಳು
bangalore , ಭಾನುವಾರ, 3 ಜುಲೈ 2022 (20:02 IST)
ನಗರದ ಖಾಸಗಿ ಶಾಲೆಗಳು ಹಣ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವಾಗೆ ಕಾಣುತ್ತೆ. ಇತ್ತೀಚೆಗೆ ಕೆಲವೊಂದು ಶಾಲೆಗಳು ಹಣದ ದುರಾಸೆಗೆ ಬಿದ್ದು ಪೋಷಕರ ರಕ್ತ ಹೀರಲು ಮುಂದಾಗಿದೆ. ಅಂದಹಾಗೆ ಶಾಲೆಯ ಪಠ್ಯಪುಸ್ತಕದಲ್ಲಿ ಹಣದ ದಂಧೆ ಎಸೆಗಲು ಖಾಸಗಿ ಶಾಲೆಗಳು ಶುರುಮಾಡಿದೆ.ಖಾಸಗಿ ಶಾಲೆಗಳ ಹಣದ ದುರಾಸೆಗೆ ಪೋಷಕರು ಬಲಿಪಾಶುಗಳಾಗ್ತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚುಮಾಡಿ ಪೋಷಕರು ತಮ್ಮ ಮಕ್ಕಳನ್ನ ಪ್ರತಿಷ್ಠಿತ ಶಾಲೆಗೆ ಸೇರಿಸುತ್ತಾರೆ. ಉಳ್ಳವರು ಹೇಗೋ ಶಾಲೆಯ ಆಡ್ಮೀಷನ್ ಸೇರಿದಂತೆ ಪುಸ್ತಕದ ಹಣ, ಬ್ಯಾಗಿನ ಹಣ, ಶೂ ವಿನ ಹಣ ಎಲ್ಲವನ್ನ ಪಾವತಿ ಮಾಡ್ತಾರೆ. ಆದ್ರೆ ಬಡವರ ಪಾಡೇನು? ತಮ್ಮ ಮಕ್ಕಳು ಎಲ್ಲರಂತೆ ಓದಲಿ ಅಂತಾ ನೂರಾರು ಆಸೆ ಕನಸು ಕಂಡು ಪೋಷಕರು ಶಾಲೆಗೆ ಸೇರಿಸುತ್ತಾರೆ. ಆದ್ರೆ ಖಾಸಗಿ ಶಾಲೆಯವರು ಯಾವುದನ್ನ ಲೆಕ್ಕಿಸದೇ ಯಾವ ಮೂಲಕ ಹಣ ಮಾಡೋಣ ಅಂತಾ ಬಕಪಾಕ್ಷಿಗಳಂತೆ ಕಾಯ್ತಿರುತ್ತಾರೆ. ಹೀಗೆ ಈಗ ಮಕ್ಕಳ ಪಠ್ಯಪುಸ್ತಕದಲ್ಲಿ ಹಣದ ದಂಧೆ ಎಸೆಗಲು ಖಾಸಗಿ ಶಾಲೆಗಳು ಮುಂದಾಗಿದೆ.ಈ ಖಾಸಗಿ ಶಾಲೆಗಳ ಹಣದ ದುರಾಸೆಗೆ ಕೊನೆಯೇ ಇಲ್ಲದಂತಾಗಿದೆ. ಈಗಾಗಲ್ಲೇ ಶೂ, ಬ್ಯಾಗ್ , ಪುಸ್ತಕ ತೆಗೆದುಕೊಳ್ಳುವಂತೆ ಒತ್ತಡ ಹೇರಬಾರದೆಂದು ಆದೇಶ ಇದೆ. ಆದ್ರು ನಗರದ ಕೆಲವೊಂದು ಖಾಸಗಿ ಶಾಲೆಗಳಾದ ನಾರಾಯಣ ಒಲಂಪಿಯಡ್ ಸ್ಕೂಲ್, ಚೇತನ್ಯ ಸ್ಕೂಲ್, ಸೇರಿದಂತೆ ಬಹುತೇಕ ಶಾಲೆಗಳು ಯಾವುದನ್ನ ಲೆಕ್ಕಿಸದೇ ಹಣ ಮಾಡುವುದನ್ನೇ ಕಾಯಕ ಮಾಡಿಕೊಂಡಿದೆ.. ಹೀಗಾಗಿ ಹಣ ಮಾಡುವುದಕ್ಕೆ ಅನ್ಯದಾರಿಯನ್ನ ಕಂಡುಕೊಳ್ಳುತ್ತಿದ್ದಾರೆ. ಈಗ ಖಾಸಗಿ ಶಾಲೆಗಳು ಹೊರಗೆ ಕಡಿಮೆ ಬೆಲೆಗೆ ಪುಸ್ತಕ ತೆಗೆದುಕೊಂಡು ಶಾಲೆಯಲ್ಲಿ  ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಿದ್ದಾರೆ. ಪುಸ್ತಕಗಳಿಗೆ ಶಾಲೆಯ ಬೈಂಡ್ , ಸೀಲ್ ಹಾಕಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡ್ತಿದ್ದಾರೆ. ಜೊತೆಗೆ ಪೋಷಕರು ಹೊರಗೆ ಪುಸ್ತಕ ತೆಗೆದುಕೊಳ್ಳುವಂತಿಲ್ಲ. ಶಾಲೆಯ ಒಳಗೆ ತೆಗೆದುಕೊಳ್ಳಬೇಕೆಂದು ಕೆಲವೊಂದು ಶಾಲೆಗಳು ಪೋಷಕರ ಮೇಲೆ ಒತ್ತಡ ಹೇರುತ್ತಿದೆ.ಶಾಲೆಯಲ್ಲಿಯೇ ಪುಸ್ತಕ ತೆಗೆದುಕೊಳ್ಳುವಂತೆ ಹೇಳುವುದು ಎಷ್ಟು ಸರಿ ಎಂದು ಪೋಷಕರು ಪ್ರಶ್ನೆ ಮಾಡ್ತಿದ್ದಾರೆ. ಅಷ್ಟೇ ಅಲ್ಲದೆ ಖಾಸಗಿ ಶಾಲೆಯ ಹಣದ ಆಮಿಷದ ವಿರುದ್ಧ ಪೋಷಕರು ಕೆಂಡಮಂಡಲರಾಗಿದ್ದು,  ಏನುಮಾಡಲಾಗದ ಸ್ಥಿತಿಗೆ  ತಲುಪಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ನರೇಶ್ ಮತ್ತು ಪವಿತ್ರ ಲೋಕೇಶ್ ಹೋಟೆಲ್ ಒಂದರಲ್ಲಿ ಸಿಕ್ಕಿಬಿದಿದ್ದಾರೆ