Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ದಿನದ 24 ಗಂಟೆ ಹೋಟೆಲ್ ಓಪನ್

Open 24-hour hotel open day in Bangalore
bangalore , ಬುಧವಾರ, 29 ಜೂನ್ 2022 (20:52 IST)
ಬೆಂಗಳೂರಿಗರಿಗೆ ಗುಡ್ ನ್ಯೂಸ್. 24 ಗಂಟೆ ಹೋಟೆಲ್ ತೆರೆಯಲು ಪೊಲೀಸ್ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಹೋಟೆಲ್ ತೆರೆಯಲು ಅನುಮತಿ ನೀಡಲಾಗಿದೆ. ಭದ್ರತಾ ದೃಷ್ಟಿಯಿಂದ ಇಡೀ ನಗರದ ಎಲ್ಲಾ ಹೋಟೆಲ್‌ಗಳ ಓಪನ್‌ಗೆ ಅನುಮತಿ ನಿರಾಕರಿಸಿದೆ. ಪೊಲೀಸ್ ಇಲಾಖೆಯ ನಿರ್ಧಾರವನ್ನು ಹೋಟೆಲ್ ಮಾಲೀಕರ ಸಂಘ ಸ್ವಾಗತಿಸಿದೆ. ವಾಣಿಜ್ಯ ಪ್ರದೇಶ, ಐಟಿಬಿಟಿ ಪ್ರದೇಶಗಳಲ್ಲಿಯೂ ಹೋಟೆಲ್ ತೆರೆಯಲು ಅನುಮತಿ ನೀಡಬೇಕೆಂದು ಒತ್ತಾಯಿಸಿದೆ.ದಿನದ 24 ಗಂಟೆಯೂ ಹೋಟೆಲ್ ತೆರೆಯಬೇಕೆಂಬ ಬೆಂಗಳೂರಿಗರ ಬಹು ದಿನಗಳ ಬೇಡಿಕೆಗೆ ಪೊಲೀಸರು ಅಸ್ತು ಎಂದಿದ್ದಾರೆ. ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಹೋಟೆಲ್ ತೆರೆಯಲು ಪೊಲೀಸರು ಅನುಮತಿ ನೀಡಿದ್ದಾರೆ. ರಾಜಧಾನಿಯಲ್ಲಿ ಯಾವಾಗಲೂ ಜನ ಜನಜಂಗುಳಿಯಿಂದ ಕೂಡಿರುತ್ತೆ. ರಾತ್ರಿ ಪಾಳಿಯಲ್ಲೂ ಸಾವಿರಾರು ಜನರು ಕೆಲಸ ಮಾಡ್ತಿದ್ದಾರೆ. ರಾತ್ರಿ ಪಾಳಿ ಕೆಲಸ ಮಾಡುವವರು ಹಾಗೂ  ಪ್ರಯಾಣಿಕರ ಊಟ, ತಿಂಡಿಗೆ ಅನುಕೂಲವಾಗಲೆಂದೆ ಕೆಲವೇ ಕೆಲವು ಸ್ಥಳಗಳಲ್ಲಿ ದಿನದ 24 ಗಂಟೆ ಹೋಟೆಲ್, ರೆಸ್ಟೋರೆಂಟ್​ ತೆರೆಯಲು ಅನುಮತಿ ನೀಡಲಾಗಿದೆ.  ಈಗಾಗಲೇ ಬೆಂಗಳೂರು ಪೊಲೀಸರು  ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಮೆಜೆಸ್ಟಿಕ್ , ಶಾಂತಿನಗರ , ಸ್ಯಾಟಲೈಟ್ ಬಸ್ ನಿಲ್ದಾಣ , ರೈಲ್ವೆ ನಿಲ್ದಾಣ , ಪ್ರಮುಖ ಬಸ್ ನಿಲ್ದಾಣಗಳಲ್ಲಿ 24 ಗಂಟೆಗಳ ಕಾಲ ಹೋಟೆಲ್ ತೆರೆಯಬಹುದು . ಈ ಜಾಗಗಳನ್ನ ಹೊರತುಪಡಿಸಿ ಬೇರೆಡೆ ಹೋಟೆಲ್ ತೆರೆಯಲು ಪೊಲೀಸರು ಅವಕಾಶ ನೀಡಿಲ್ಲ.ಬೆಂಗಳೂರಿನ ಇತರೆ ಭಾಗಗಳಲ್ಲಿ ಹೋಟೆಲ್ ತೆರೆಯಲು ಅನುಮತಿ ಕೊಡಲು ಕಷ್ಟ ಆಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ, ಬಸ್ ಸ್ಟಾಂಡ್‍ಗಳಲ್ಲಿ ರಾತ್ರಿ ಪ್ರಯಾಣಿಕರು ಬರುತ್ತಾರೆ. ಇಂತಹ ಜನರಿಗೆ ಉಪಹಾರ ಸಿಗುವ ನಿಟ್ಟಿನಲ್ಲಿ ಆ ಭಾಗದಲ್ಲಿ ಹೋಟೆಲ್ ತೆರೆಯುವುದು ಸರಿಯಾಗಿದೆ. ಆದರೆ ಇಡೀ ಟೌನ್ ನಲ್ಲಿ ಹೋಟೆಲ್ ಓಪನ್ ಮಾಡಬೇಕು ಎನ್ನುವುದು ಕಷ್ಟ ಆಗುತ್ತದೆ ಎಂದಿದ್ದಾರೆ.
 
 
ಕಳೆದ ವರ್ಷವೇ ಸರ್ಕಾರ ಬೆಂಗಳೂರಿನಲ್ಲಿ ದಿನದ 24 ಗಂಟೆ ಹೋಟೆಲ್ ತೆರೆಯಲು ಅನುಮತಿ ನೀಡಿತ್ತು. ಆದರೆ ಕೊರೊನಾ ಕಾರಣಗಳಿಂದ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಈಗ ಹೋಟೆಲ್ ತೆರೆಯಲು ಗ್ರೀನ್ ಸಿಗ್ನಲ್ ಸಿಕ್ಕಿರೋದ್ರಿಂದ ಹೋಟೆಲ್ ಮಾಲೀಕರ ಸಂಘ  ಪೊಲೀಸ್ ಇಲಾಖೆ ನಿರ್ಧಾರವನ್ನು ಸ್ವಾಗತಿಸಿದೆ. ಹಾಗೆ ವಾಣಿಜ್ಯ ಪ್ರದೇಶ, ಐಟಿಬಿಟಿ ಪ್ರದೇಶಗಳಲ್ಲಿಯೂ 24 ಗಂಟೆ ಹೋಟೆಲ್ ತೆರೆಯಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದೆ.ಪ್ರಯಾಣಿಕರ ಹಿತಾದೃಷ್ಟಿಯಿಂದ  24 ಗಂಟೆ ಹೋಟೆಲ್ ತೆರೆಯಲು ಪೊಲೀಸರು ಅನುಮತಿ ನೀಡಿರುವುದು ಒಳ್ಳೆಯ ನಿರ್ಧಾರ. ಹಾಗೆ ರಾತ್ರಿ ಅಪರಾಧ ಕೃತ್ಯಗಳು ನಡೆಯದಂತೆ ಪೊಲೀಸ್ ಇಲಾಖೆಯು ಸೂಕ್ತ ಭದ್ರತೆ ಕೈಗೊಳ್ಳಬೇಕು. ಇದು ಪೊಲೀಸರಿಗೆ ಒಂದು ಸವಾಲಾಗಿ ಪರಿಣಮಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನವಾರ ಮತ್ತೆ ರೋಡ್ ಗೆ ಇಳಿಯಲಿದ್ದಾರೆ ಮಾರ್ಷಲ್ ಗಳು