Publish Date: Mon, 04 Jul 2022 (14:12 IST)
Updated Date: Mon, 04 Jul 2022 (14:16 IST)
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಗಗನಕ್ಕೇರಿದ್ದ ಟೊಮೆಟೊ ಬೆಲೆ ದಿಢೀರನೆ ಪಾತಾಳಕ್ಕೆ ಕುಸಿದಿದೆ. ಕಳೆದ ತಿಂಗಳಿಂದ ಟೊಮೆಟೊ ಬೆಲೆ 100ರ ಗಡಿ ದಾಟಿತ್ತು. ಕಳೆದ ಒಂದು ವಾರದಿಂದ ಬೆಲೆ ಇಳಿಕೆಯತ್ತ ಸಾಗಿದ್ದು, ಕೆ.ಜಿಗೆ 10 ರೂಪಾಯಿಗೆ ತಲುಪಿದೆ.
ಮಾರುಕಟ್ಟೆಗೆ ಟೊಮೆಟೊ ಸಾಗಿಸುವಾಗಲೇ ಬೆಲೆ ಕುಸಿತವಾಗಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಸ್ಥಳೀಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿರುವುದು ಸಹ ಬೆಲೆ ಕುಸಿಯಲು ಕಾರಣವಾಗಿದೆ. ಆಷಾಢ ಮಾಸದ ಹಿನ್ನೆಲೆಯಲ್ಲಿ ಒಂದು ತಿಂಗಳು ಯಾವುದೇ ಶುಭಾ ಸಮಾರಂಭಗಳು ನಡೆಯುವುದು ಕಡಿಮೆ ಆದ್ದರಿಂದ ಟೊಮೊಟೊ ಬೆಲೆ ಏರಿಕೆ ಆಗೋ ಲಕ್ಷಣ ಕೂಡ ಕಾಣಿಸುತ್ತಿಲ್ಲ. ಹೀಗಾಗಿ ಟೊಮ್ಯಾಟೊ ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದಾರೆ