Publish Date: Wed, 28 Feb 2018 (06:34 IST)
Updated Date: Wed, 28 Feb 2018 (06:40 IST)
ಶಿವಮೊಗ್ಗ: ಜೋಗ ಜಲಪಾತಕ್ಕೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಮೃತದೇಹ ಹುಡುಕಲು ಜಲಪಾತಕ್ಕೆ ಇಳಿದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಕತ್ತಲಾದರೂ ವಾಪಸ್ಸು ಬರದೆ ಆತಂಕ ಸೃಷ್ಟಿಯಾಗಿದೆ.
ಮೃತದೇಹ ಹುಡುಕಲೆಂದು ಮಂಗಳವಾರ ಮಧ್ಯಾಹ್ನ ಮೈಸೂರು ಬಂಗಲೆ ಬಳಿಯ ಮೆಟ್ಟಿಲುಗಳ ಮೂಲಕ ಜಲಪಾತದ ಗುಂಡಿಗೆ ಇಳಿದಿದ್ದ ಜ್ಯೋತಿರಾಜ್ ತಂಡ ತಟದಲ್ಲಿ ಶೋಧ ನಡೆಸಿತ್ತು. ನಂತರ ರಾಜ ಹಾಗೂ ರೋರರ್ ಜಲಪಾತದ ಮಧ್ಯೆ ಗುಹೆಯಂತಿರುವ ಪ್ರದೇಶದ ಬಳಿ ಹೋದ ಜ್ಯೋತಿರಾಜ್ ನಾಪತ್ತೆಯಾಗಿದ್ದಾರೆ.
ಬೆಂಗಳೂರಿನ ಮಂಜುನಾಥ್ ಮೂರು ದಿನಗಳ ಹಿಂದೆ ಬೈಕ್‌ನಲ್ಲಿ ಜೋಗಕ್ಕೆ ಬಂದು ಡೆತ್‌ನೋಟ್ ಬರೆದಿಟ್ಟು ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಜಲಪಾತದ ಬಳಿ ಬೈಕ್ ಮತ್ತು ಡೆತ್‌ನೋಟ್ ಪತ್ತೆಯಾಗಿದೆ. ಜ್ಯೋತಿರಾಜ್ ಅವರು ಈ ಹಿಂದೆ ಜೋಗ ಜಲಪಾತದಲ್ಲಿ ಹಲವು ಮೃತದೇಹಗಳನ್ನು ಹುಡುಕಿ ತೆಗೆದಿದ್ದರು. ಇದನ್ನು ತಿಳಿದ ಮಂಜುನಾಥ್ ನ ಕುಟುಂಬದವರು ಮೃತದೇಹ ಹುಡುಕಿಕೊಡುವಂತೆ ಜ್ಯೋತಿರಾಜ್ ಬಳಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಜ್ಯೋತಿರಾಜ್ ಜೋಗಕ್ಕೆ ಬಂದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ