ವಿಲನ್ ಸಿನಿಮಾ ಬಗ್ಗೆ ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್ ಹೀಗೆ ಹೇಳಿಬಿಟ್ಟರೇಕೆ?!

ಶುಕ್ರವಾರ, 23 ಫೆಬ್ರವರಿ 2018 (08:25 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಜತೆಯಾಗಿ ನಟಿಸಿದ ವಿಲನ್ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲವಿದೆ. ಹೋದಲೆಲ್ಲಾ ಈ ಸಿನಿಮಾ ಯಾವಾಗ ಹೊರಬರುತ್ತದೆ ಎಂಬ ಪ್ರಶ್ನೆ ಕೇಳಿ ಸ್ವತಃ ಕಿಚ್ಚನಿಗೇ ಬೇಸರವಾಗಿರಬೇಕು.
 

ಹೇಳಿ ಕೇಳಿ ಇದು ಜೋಗಿ ಪ್ರೇಮ್ ಸಿನಿಮಾ. ಅವರು ಯಾವತ್ತೂ ಬೇಗ ಸಿನಿಮಾ ಮುಗಿಸುವ ಜಾಯಮಾನದವರಲ್ಲ. ತಮ್ಮದೇ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಪ್ರೇಕ್ಷಕ ಪ್ರಭು ಬಿಡಬೇಕಲ್ಲಾ?

ಸುದೀಪ್ ಗೆ ಸಿನಿಮಾ ಟೀಸರ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಟ್ವಿಟರ್ ನಲ್ಲಿ ಉತ್ತರಿಸಿರುವ ಕಿಚ್ಚ, ನನಗೂ ಗೊತ್ತಿಲ್ಲ. ನಾನೂ ಎದುರು ನೋಡುತ್ತಿದ್ದೇನೆ. ಪ್ರೇಮ್ ಒಬ್ಬರೇ ಈ ಪ್ರಶ್ನೆಗೆ ಉತ್ತರ ಹೇಳಬಲ್ಲರು ಎಂದಿದ್ದಾರೆ ಸುದೀಪ್. ಬಹುಶಃ ಅವರಿಗ ಈ ಪ್ರಶ್ನೆಗೆ ಉತ್ತರಿಸಿ ಸಾಕಾಗಿರಬೇಕು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟ ಸುದೀಪ್, ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಗೆ ಕೊಟ್ಟ ಭರವಸೆ ಏನು ಗೊತ್ತಾ….?