Select Your Language

Notifications

webdunia
webdunia
webdunia
webdunia

ಅತುಲ್ ಸುಭಾಷ್ ಸಾವಿಗೆ ನ್ಯಾಯ ಖಚಿತ: ಪೊಲೀಸ್ ಆಯುಕ್ತ ಬಿ. ದಯಾನಂದ

Atul Subhash Suicide Case, Police Commissioner B. Dayananda, Atul Subhash Case Investigation

Sampriya

ಬೆಂಗಳೂರು , ಶುಕ್ರವಾರ, 13 ಡಿಸೆಂಬರ್ 2024 (20:16 IST)
Photo Courtesy X
ಬೆಂಗಳೂರು: ಪತ್ನಿ ಹಾಗೂ ಆಕೆಯ ಮನೆಯವ ಕಿರುಕುಳಕ್ಕೆ ಬೇಸತ್ತು ಈ ವಾರದ ಆರಂಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅತುಲ್ ಸುಭಾಷ್ ಪ್ರಕರಣದ ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮೃತನ ಸಹೋದರನ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ಎರಡು ತಂಡಗಳನ್ನು ರಚಿಸಲಾಗಿದೆ. ಅವರ ಸಹೋದರನ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ. ನಾವು ಪುರಾವೆಗಳನ್ನು ಸಂಗ್ರಹಿಸುತ್ತಿದ್ದೇವೆ. ನಾವು ನ್ಯಾಯ ಒದಗಿಸುವುದನ್ನು ಖಚಿತಪಡಿಸುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ.

ಅತುಲ್ ಸುಭಾಷ್ ಅವರ ಆತ್ಮಹತ್ಯೆ ಪ್ರಕರಣದ ಇತ್ತೀಚಿನ ದುರಂತ ಘಟನೆಯ ಹಿನ್ನೆಲೆಯಲ್ಲಿ ಕೌಟುಂಬಿಕ ದೌರ್ಜನ್ಯ ಕಾನೂನುಗಳಲ್ಲಿ ಸುಧಾರಣೆ ಮತ್ತು ಅವುಗಳ ದುರ್ಬಳಕೆಯನ್ನು ತಡೆಯಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ವಕೀಲ ವಿಶಾಲ್ ತಿವಾರಿ ಅವರು ಅರ್ಜಿ ಸಲ್ಲಿಸಿದ್ದು, ಪ್ರೀತಿ ಗುಪ್ತಾ ವಿರುದ್ಧ ಜಾರ್ಖಂಡ್ ರಾಜ್ಯ ಮತ್ತು ಅಚಿನ್ ಗುಪ್ತಾ ವಿರುದ್ಧ ಭಾರತದ ಸುಪ್ರೀಂ ಕೋರ್ಟ್ ನೀಡಿರುವ ಅವಲೋಕನಗಳನ್ನು ಪರಿಗಣಿಸಲು ಮತ್ತು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಟಿ ನೀಡಿ ವಿಚ್ಛೇಧನವನ್ನು ಸಂಭ್ರಮಿಸಿ, ಮಾಜಿ ಪತ್ನಿಯ ಆಕೃತಿ ಜತೆಗೆ ಫೋಸ್ ಕೊಟ್ಟ ವ್ಯಕ್ತಿ