ಮುನಿರತ್ನ ಬಿಜೆಪಿ ಸೇರ್ಪಡೆಗೆ ವಿರೋಧಿಸಿದ ಜ್ಞಾನ ಭಾರತಿ ವಾರ್ಡ್ ಬಿಜೆಪಿ ಅಧ್ಯಕ್ಷನ ಉಚ್ಛಾಟನೆ

ಗುರುವಾರ, 22 ಆಗಸ್ಟ್ 2019 (10:48 IST)
ಬೆಂಗಳೂರು : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜ್ಞಾನಭಾರತಿ ವಾರ್ಡ್ ಅಧ್ಯಕ್ಷ ಎಂ.ಆರ್.ಕುಮಾರ್ ಅವರನ್ನು ಉಚ್ಚಾಟನೆ ಮಾಡಲಾಗಿದೆ.
ಕಾಂಗ್ರೆಸ್ ನಿಂದ ಅನರ್ಹಗೊಡ ಶಾಸಕ ಮುನಿರತ್ನ ಬಿಜೆಪಿ ಸೇರ್ಪಡೆಗೆ ಸ್ಥಳೀಯ ಬಿಜೆಪಿ ಮುಖಂಡರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಜ್ಞಾನ ಭಾರತಿ ವಾರ್ಡ್ ಬಿಜೆಪಿ ಅಧ್ಯಕ್ಷ ಎಂ.ಆರ್. ಕುಮಾರ್ ಅವರು ಮುನಿರತ್ನ ಬಿಜೆಪಿ ಸೇರ್ಪಡೆಗೆ ವಿರೋಧಿಸಿ ಪತ್ರ ಬರೆದಿದ್ದರು.


ಆದಕಾರಣ ಪಕ್ಷ ವಿರೋಧ ಚಟುವಟಿಕೆ ಹಿನ್ನೆಲೆಯಲ್ಲಿ ಎಂ.ಆರ್. ಕುಮಾರ್ ಅವರಿಗೆ 6 ವರ್ಷಗಳ ಕಾಲ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿ ರಾಜರಾಜೇಶ್ವರಿ ನಗರ ಬಿಜೆಪಿ ಅಧ್ಯಕ್ಷ ಲಕ್ಷ್ಮೀಕಾಂತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಿ ಚಿದಂಬರಂ ಅರೆಸ್ಟ್ ಆಗಲು ಕಾರಣವಾಗಿದ್ದು ಆ ಪ್ರಭಾವಿ ಮಹಿಳೆ ನೀಡಿದ ಸ್ಟೇಟ್ ಮೆಂಟ್!