Select Your Language

Notifications

webdunia
webdunia
webdunia
webdunia

JDSಗೆ H.D. ರೇವಣ್ಣ ಮುಳುವಾದ್ರಾ?

JDSಗೆ H.D. ರೇವಣ್ಣ ಮುಳುವಾದ್ರಾ?
ಹಾಸನ , ಶುಕ್ರವಾರ, 31 ಮಾರ್ಚ್ 2023 (18:11 IST)
ಹಾಸನ ವಿಧಾನಸಭಾ ಕ್ಷೇತ್ರದ JDS ಟಿಕೆಟ್ ಗೊಂದಲ ಮುಂದುವರಿದಿದೆ.. ಹಾಸನದಲ್ಲಿ JDS ಸೋತ್ರೂ ಪರವಾಗಿಲ್ಲ ಸ್ವರೂಪ್​ಗೆ ಟಿಕೆಟ್ ಬೇಡ ಅಂತ ಮಾಜಿ ಸಚಿವ H.D. ರೇವಣ್ಣ ಹೇಳಿದ್ದಾರೆ ಎನ್ನಲಾಗ್ತಿದೆ. ಸ್ವರೂಪ್‌ಗೆ ಟಿಕೆಟ್ ತಪ್ಪಿಸಲೇಬೇಕೆಂಬ ಹಠಕ್ಕೆ ಮಾಜಿ ಸಚಿವ ರೇವಣ್ಣ ಬಿದ್ದಿದ್ದಾರೆ.. ಮಾಜಿ ಸಿಎಂ H.D. ಕುಮಾರಸ್ವಾಮಿ ಮೂಲಕ ಟಿಕೆಟ್‌ಗೆ ಲಾಬಿ ಮಾಡ್ತಿರೋದಕ್ಕೆ ಸ್ವರೂಪ್ ಮೇಲೆ ರೇವಣ್ಣ ಕೆಂಡ ಕಾರ್ತಿದ್ದಾರೆ.. ಸ್ವರೂಪ್ ಬೆನ್ನಿಗೆ ನಿಂತಿರೋ ಕುಮಾರಸ್ವಾಮಿ ಹೇಳಿಕೆಗಳಿಂದ ರೇವಣ್ಣ ಸಿಟ್ಟಾಗಿದ್ದಾರೆ ಎನ್ನಲಾಗಿದೆ.. ಸ್ವರೂಪ್‌ಗೆ ಟಿಕೆಟ್ ತಪ್ಪಿಸಿದ್ರೆ JDS ಕಾರ್ಯಕರ್ತರ ಮನಸ್ಸಿನ ಮೇಲೆ ಆಘಾತ ಉಂಟಾಗಲಿದ್ದು, ಹಾಸನ ಕ್ಷೇತ್ರದ ಜೊತೆಗೆ 10ಕ್ಕೂ ಹೆಚ್ಚಿನ ಕ್ಷೇತ್ರಗಳ ಮೇಲೆ ಎಫೆಕ್ಟ್ ಸಾಧ್ಯತೆ ಇದೆ. ಹಳೇ ಮೈಸೂರು ಭಾಗದಲ್ಲಿ JDS ಭದ್ರಗೊಳಿಸಿಕೊಳ್ಳೋಕೆ HDK ಪ್ಲ್ಯಾನ್‌ ಮಾಡಿಕೊಂಡಿದ್ದು, ಮಾಜಿ ಪ್ರಧಾನಿ H.D. ದೇವೇಗೌಡ ಅನಾರೋಗ್ಯದ ಮಧ್ಯೆಯೂ ಕಾರ್ಯಕ್ರಮ ಸಕ್ಸಸ್‌ ಆಗಿದೆ.. ಮೊನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ H.D. ರೇವಣ್ಣ ಸ್ವರೂಪ್ ಯಾರು ಅಂತಾ ಗೊತ್ತಿಲ್ಲ ಎಂದಿದ್ರು.. ಸ್ವರೂಪ್‌ ಗೊತ್ತಿಲ್ಲ ಎಂದಿದ್ದಕ್ಕೆ ರೇವಣ್ಣ ವಿರುದ್ಧ JDS ಕಾರ್ಯಕರ್ತರು ಬೇಸರಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಳೂರು ಗೋಪಾಲಕೃಷ್ಣ ನಡೆಗೆ ಖಂಡನೆ