Publish Date: Fri, 31 Mar 2023 (17:11 IST)
Updated Date: Fri, 31 Mar 2023 (17:21 IST)
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಒಬ್ಬರನೊಬ್ಬರು ಟೀಕಿಸುವುದು ಮಾಮೂಲಿಯಾಗಿಬಿಟ್ಟಿದೆ.. ಇದೀಗ ಸಚಿವ ಮುನಿರತ್ನ ವಿರುದ್ಧ ಸಂಸದ D.K. ಸುರೇಶ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ D.K. ಸುರೇಶ್, ಕನ್ನಡಿಗರ ಮೇಲೆ ತಮಿಳಿಗರನ್ನ ಎತ್ತಿಕಟ್ಟುವ ಮೂಲಕ ಬೆಂಗಳೂರಿನಲ್ಲಿ ಭಯದ ವಾತಾವರಣ ಸೃಷ್ಠಿ ಮಾಡಿದ್ದಾರೆ.. ಕ್ಷೇತ್ರದಲ್ಲಿ ತಮಿಳಿಗರು 60-70 ವರ್ಷ ವಾಸವಿದ್ದಾರೆ.. ಮಾ.19ರ ರಾತ್ರಿ ಸಚಿವರು ತಮಿಳಿನಲ್ಲಿ ಮಾತಾಡಿ ಕನ್ನಡಿಗರ ವಿರುದ್ದ ತಮಿಳರನ್ನು ಎತ್ತಿ ಕಟ್ಟಿದ್ದಾರೆ.. ಅದಲ್ಲದೆ R.R.ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮ ವಿರುದ್ದ ಒಕ್ಕಲಿಗರ ಆಹೆಣ್ಣು ಮಗಳು ಬಂದರೆ ಓಡೆದು ಓಡಿಸಿ ಎಂದಿದ್ದಾರೆ.. ಈ ರೀತಿಯ ಹೇಳಿಕೆ ನೀಡಿರುವುದರ ವಿಚಾರವಾಗಿ ಸಚಿವ ಮುನಿರತ್ನ ವಿರುದ್ಧ ಸಂಸದ D.K. ಸುರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು
geetha
Publish Date: Fri, 31 Mar 2023 (17:11 IST)
Updated Date: Fri, 31 Mar 2023 (17:21 IST)