Select Your Language

Notifications

webdunia
webdunia
webdunia
webdunia

ಕುಮಾರಸ್ವಾಮಿಗೆ ಸವಾಲೆಸೆದ ಡಿಕೆ ಶಿವಕುಮಾರ್‌ಗೆ ಜೆಡಿಎಸ್‌ ಕೌಂಟರ್‌

Central Minister HD Kumaraswamy

Sampriya

ಬೆಂಗಳೂರು , ಶನಿವಾರ, 29 ಮಾರ್ಚ್ 2025 (18:19 IST)
ಬೆಂಗಳೂರು: ಕುಮಾರಸ್ವಾಮಿಗೆ ಕಾಳಜಿ ಇದ್ದರೆ ಹಸುಗಳ ಮೇವಿನ ಬೆಲೆ ಕಡಿಮೆ ಮಾಡಿಸಲಿ ಎಂದು ಸವಾಲು ಎಸೆದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಜೆಡಿಎಸ್‌ ತಿರುಗೇಟು ನೀಡಿ ಪೋಸ್ಟ್ ಮಾಡಿದ್ದಾರೆ.

ಮಿಸ್ಟರ್‌ ಡಿಕೆ ಶಿವಕುಮಾರ್‌ ಅವರೇ ಎಂದು ಬರೆದು ಪೋಸ್ಟ್‌ ಹಾಕಿದ ಜೆಡಿಎಸ್‌, ರೈತರ ಬಗ್ಗೆ ಕಾಳಜಿ ಇರುವ ಕಾರಣಕ್ಕೆ 2 ಬಾರಿ ರೈತರ ಸಾಲ ಮನ್ನಾ  ಮಾಡಿದ್ದು. ಅನ್ನದಾತರ ಅಹವಾಲು ಕೇಳಲೆಂದೇ ವಿಧಾನಸೌಧದ ಬಾಗಿಲನ್ನು ಸದಾ ತೆರೆದಿಟ್ಟು ರೈತರೊಂದಿಗೆ ಸಭೆಗಳನ್ನು ನಡೆಸಿದ್ದಾರೆ.  

ಹಿಂದಿನ ಕಾಂಗ್ರೆಸ್ ಸರ್ಕಾರ ಒಕ್ಕೂಟ ಸರ್ಕಾರದಲ್ಲಿ ಹೇಗೆ ಆಡಳಿತ ನಡೆಸಿತ್ತು ಎಂದು ತಮಗೆ ಅರಿವಿಲ್ಲವೇ? ಅಥವಾ ಮಂದ ಬುದ್ಧಿಯೇ? ಜಾಣ ಕುರುಡೇ.

ಸಂಪದ್ಭರಿತವಾಗಿರುವ ಕರ್ನಾಟಕವನ್ನು ದಶಕಗಳ ಕಾಲ ಕಾಂಗ್ರೆಸ್‌ ಆ‍ಳ್ವಿಕೆ ಮಾಡಿ ಕೊಳ್ಳೆ ಹೊಡೆದಿದ್ದೀರಿ, ಈಗಲೂ ಎಟಿಎಂನಂತೆ ಬಳಸಿಕೊಳ್ಳುತ್ತಿದ್ದೀರಿ.

ಮೊದಲು ಕರ್ನಾಟಕದಲ್ಲಿ ಲೂಟಿ ಮಾಡುವುದನ್ನು ನಿಲ್ಲಿಸಿ.  ಸರ್ಕಾರಿ ಗುತ್ತಿಗೆಯಲ್ಲಿ 60% ಕಮೀಷನ್‌ ಪಡೆಯುತ್ತಿರುವುದನ್ನು ನಿಲ್ಲಿಸಿ.

ಬೆಂಗಳೂರಲ್ಲಿ ನಿಮ್ಮ ಕುಟುಂಬದ ಆಸ್ತಿ ವಿಸ್ತರಣೆ ಯೋಜನೆಗಳನ್ನು ನಿಲ್ಲಿಸಿ. ರೌಡಿಸಂ, ಬ್ಲೂಫಿಲ್ಮ್ ದಂಧೆ, ಹನಿಟ್ರಾಪ್‌ ದಂಧೆ ನಿಲ್ಲಿಸಿ. ರಾಜಕೀಯ ವ್ಯಭಿಚಾರ ಮಾಡುವುದನ್ನು ನಿಲ್ಲಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

Ugadi Festival: ಯುಗಾದಿ ಹಬ್ಬಕ್ಕೆ ಎಲ್ಲದಕ್ಕೂ ರೇಟು, ಹೂವು, ಹಣ್ಣು ಬೆಲೆ ಕೇಳೋ ಹಾಗೇ ಇಲ್ಲ