Publish Date: Mon, 06 Jun 2022 (19:09 IST)
Updated Date: Mon, 06 Jun 2022 (19:11 IST)
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನಕ್ಕಿಂತ ಗಣಿತ ಲೆಕ್ಕಾಚಾರ ವರ್ಕ್ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಅನ್ನು ಸುಲಭವಾಗಿ ಯಾರು ನಾಶ ಮಾಡಲು ಆಗಲ್ಲ. ಕಾರ್ಯಕರ್ತರ ಹೋರಾಟದ ಮೇಲೆ ಜೆಡಿಎಸ್ ನಿಂತುಕೊಂಡಿದೆ. ಬಿಟ್ಟು ಹೋದ ನಾಯಕರು, ಚುನಾವಣೆಗಳನ್ನು ಉಪಯೋಗ ಮಾಡಿಕೊಂಡ್ರೆ ಅದು ಸಾಧ್ಯವಿಲ್ಲ ಎಂದಿದ್ದಾರೆ. ಕ್ರಿಕೆಟ್ ಟೀಮ್ ಗೆದ್ದಾಗ ಕಪ್ಪು ತೆಗೆದುಕೊಳ್ಳವುದು ಕ್ಯಾಪ್ಟನ್ ಮಾತ್ರ. ಇತರ ಆಟಗಾರ ಶ್ರಮವು ಟೀಮ್ ಗೆಲ್ಲಲು ಕಾರಣವಾಗುತ್ತದೆ ಅದೇ ರೀತಿ ಕುಮಾರಸ್ವಾಮಿ ಕಪ್ ತೆಗೆದುಕೊಂಡಿರಬಹುದೆಂದು ಎಂಬ ಬಸವರಾಜ ಹೊರಟ್ಟಿ ಹೇಳಿಕೆಗೆ ಹೆಚ್ಡಿಕೆ ಕಿಡಿಕಾರಿದ್ದಾರೆ. ಕಪ್ ಗೆಲ್ಲಿಸಲು ಅನೇಕರು ಹೋರಾಟ ಮಾಡುತ್ತಾರೆ. ಆದ್ರೆ ನಾಯಕ ಕಪ್ ಹಿಡಿಯೋದು ಪದ್ದತಿ. ನಾನೇ ಬ್ಯಾಟಿಂಗ್, ಪೀಲ್ಡಿಂಗ್, ಬೌಲಿಂಗ್ ಮಾಡಿದ್ದೇನೆ. ನಮ್ಮಿಂದ ಎಲ್ಲಾ ಪಡೆದುಹೋದ ಮೇಲೆ ಮಾತಾಡ್ತಾರೆ. ಅವರ ಗೆಲುವಿಗೆ ಯಾವ ರೀತಿ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.