Select Your Language

Notifications

webdunia
webdunia
webdunia
webdunia

30 ವರ್ಷದೊಳಗಿನವರಲ್ಲೂ ಹೆಚ್ಚಾಗ್ತಿದೆ ಹಾರ್ಟ್ ಅಟ್ಯಾಕ್

30 ವರ್ಷದೊಳಗಿನವರಲ್ಲೂ ಹೆಚ್ಚಾಗ್ತಿದೆ ಹಾರ್ಟ್ ಅಟ್ಯಾಕ್
bangalore , ಭಾನುವಾರ, 5 ಜೂನ್ 2022 (19:31 IST)
ಆಧುನಿಕ ಜೀವನ ಶೈಲಿಯಿಂದ ಯುವಕರು  ಇನ್ನಿಲ್ಲದ ಸಮಸ್ಯೆಗೆ ಬಲಿಯಾಗ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಯಸ್ಸಿನ ವಯೋಮಿತಿ ಇಲ್ಲದೇ ಎಷ್ಟೋ ಜನರು ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗ್ತಿದ್ದಾರೆ. ಆದ್ರಲ್ಲೂ 30 ರ ವಯಸ್ಸಿನ ಯುವಕರಲ್ಲಿ ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಆಗ್ತಿದೆ.ಬಿಡುವಿಲ್ಲದ ಬೆಂಗಳೂರಿನ ಜೀವನ ಶೈಲಿಯಿಂದ ಎಷ್ಟೋ ಜನರು ಅತೀಯಾದ ಒತ್ತಡಕ್ಕೆ ಒಳಗಾಗ್ತಿದ್ದಾರೆ.ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಹೃದಯ ಸಂಬಂಧಿ ಖಾಯಿಲೆ ಉಲ್ಬಣಿಸುತ್ತಿತ್ತು. ಆದ್ರೆ ಈಗ ವಯಸ್ಸಿನ ಅಂತರವಿಲ್ಲದೆ ಎಲ್ಲರಲ್ಲೂ ಹೃದಯ ಖಾಯಿಲೆ ಉಲ್ಬಣಿಸುತ್ತಿದೆ. ಆದ್ರಲ್ಲೂ ಹದಿಹರೆಯಾದ ಯುವಕರು ಹೃದಯ ಖಾಯಿಲೆಗೆ ಒಳಗಾಗ್ತಿದ್ದಾರೆ. ಅತೀ ಬೇಗ ಯಶಸ್ಸುಗಳಿಸಬೇಕೆಂದು ಆತಂಕಕ್ಕೆ ಒಳಗಾಗ್ತಿರುವುದರಿಂದ , ನಿದ್ರಾಹೀನತೆಯಿಂದ , ಧೂಮಪಾನ ಮತ್ತು ಡ್ರಾಗ್ಸ್ ಸೇವನೆಯಿಂದಲ್ಲೂ ಹಾರ್ಟ್ ಅಟ್ಯಾಕ್ ಗೆ ಸಂಭವಿಸುತ್ತಿದೆ..ದಿನದಿಂದ ದಿನಕ್ಕೆ ಹೃದಯ ಖಾಯಿಲೆಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗ್ತಿದೆ.

ಹೃದಯ ಖಾಯಿಲೆಯ ಮುನ್ಸೂಚನೆ 
 
- ಎದೆನೋವು
- ಅನಿಯಮಿತ ಹೃದಯ ಬಡಿತ
- ಉಸಿರಾಟದ ತೊಂದರೆ
- ಲಘು ತಲೆನೋವು
- ಪ್ರಜ್ಞಾ ಹೀನತೆ
 
ಹೃದಯದ ಆರೋಗ್ಯಕ್ಕೆ ವೈದ್ಯರ ಸಲಹೆ
 
- ಬಿಪಿ ಕಡಿಮೆ ಮಾಡಿಕೊಳ್ಳಬೇಕು
- ರಕ್ತದಲ್ಲಿ ಸಕ್ಕರೆ ತಗ್ಗಿಸಬೇಕು
- ಸೋಂಟದಲ್ಲಿ ಕೊಬ್ಬು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು
- ತೂಕ ಹೆಚ್ಚಾಗದಂತೆ ಮುತುವರ್ಜಿವಹಿಸಬೇಕು
- ಅತಿಯಾದ ಆಸೆ ಇಟ್ಟುಕೊಳ್ಳಬಾರದು
 
 
ಬೆಂಗಳೂರಿನಂತಹ ನಗರದಲ್ಲಿ ಜನರು ಆರೋಗ್ಯದ ಕಡೆ ಗಮನಹರಿಸುವದಕ್ಕಿಂತ ದುಡಿಯುವುದರ ಕಡೆನೇ ಹೆಚ್ಚು ಒಲವು ತೋರುತ್ತಾರೆ. ಸರಿಯಾಗಿ ಊಟ ಮಾಡದೇ , ನಿದ್ದೆ ಮಾಡದೇ ನಿರ್ಲಕ್ಷ್ಯವಹಿಸುವುದು.  ಫಾಸ್ಟ್ ಫುಡ್ ಸೇವನೆ ಅತೀಯಾಗಿ ಮಾಡುವುದರಿಂದ ಚಿಕ್ಕವಯಸ್ಸಿನಲ್ಲಿ ಹಾರ್ಟ್ ಅಟ್ಯಾಕ್ ಸಂಭವಿಸುತ್ತೆ.ಹಾಗಾಗಿ ರೋಗ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನ ಸಂಪರ್ಕಿಸುವುದು ಅವಶ್ಯಕ .ಹಾಗೆ ಸೂಕ್ತ ಚಿಕಿತ್ಸೆಯನ್ನ ಪಡೆಯಬೇಕು. ಇಲ್ಲವಾದಲಿ ಅದು ಬೇರೆ ಸ್ವರೂಪವೇ ಪಡೆಯುತ್ತೆ.ಹಾಗಾಗಿ ಆದಷ್ಟು ಎಚ್ಚರವಹಿಸಿ... ನಿರ್ಲಕ್ಷ್ಯಸದಿರಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಪಾಲರಿಂದ ಸಸಿ ನೆಡುವ ಕಾರ್ಯಕ್ರಮ