Select Your Language

Notifications

webdunia
webdunia
webdunia
webdunia

ಶೇನ್ ವಾರ್ನ್ ಟವೆಲ್ನಲ್ಲಿ ರಕ್ತದ ಕಣ ಇತ್ತು ಎಂದ ಪೊಲೀಸ್!

ಶೇನ್ ವಾರ್ನ್ ಟವೆಲ್ನಲ್ಲಿ ರಕ್ತದ ಕಣ ಇತ್ತು ಎಂದ ಪೊಲೀಸ್!
ಬ್ಯಾಂಕಾಕ್ , ಸೋಮವಾರ, 7 ಮಾರ್ಚ್ 2022 (09:02 IST)
ಬ್ಯಾಂಕಾಕ್ : ಥಾಯ್ಲೆಂಡ್ನಲ್ಲಿ ಹೃದಯಾಘಾತದಿಂದ ಮರಣ ಹೊಂದಿದ ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ತಂಗಿದ್ದ ಥಾಯ್ಲೆಂಡ್ನ ವಿಲ್ಲಾದ ಕೋಣೆಯಲ್ಲಿ ಮತ್ತು ಟವೆಲ್ನಲ್ಲಿ ರಕ್ತದ ಕಣ ಪತ್ತೆಯಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವಾರ್ನ್ ಮಾರ್ಚ್ 3 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಥಾಯ್ಲೆಂಡ್ನ ವಿಲ್ಲಾದಲ್ಲಿದ್ದ ವಾರ್ನ್ಗೆ ಏಕಾಏಕಿ ಹೃದಯಘಾತವಾಗಿದೆ. ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ಸಾಗಿಸಿದರೂ ಕೂಡ ಬದುಕುಳಿದಿರಲಿಲ್ಲ.

ಈ ಬಗ್ಗೆ ಸ್ಥಳೀಯ ಮಾಧ್ಯವೊಂದರ ವರದಿ ಪ್ರಕಾರ, ವಾರ್ನ್ ಇದ್ದ ಕೋಣೆಯಲ್ಲಿ ರಕ್ತದ ಕಣಗಳು ಪತ್ತೆಯಾಗಿದ್ದು, ಸಿಪಿಆರ್ ಪರೀಕ್ಷೆ ನಡೆಸುವ ಸಂದರ್ಭ ವಾರ್ನ್ ಕೆಮ್ಮಿದಾಗ ರಕ್ತ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮಾಲಿಕನ ಹೆಣ್ಣು ಮಕ್ಕಳ ನಗ್ನ ವಿಡಿಯೋ ಮಾಡಿ ಸಿಕ್ಕಿಬಿದ್ದ ನೌಕರ