Select Your Language

Notifications

webdunia
webdunia
webdunia
webdunia

ಸ್ಪರ್ಧಾತ್ಮಕ ಪರೀಕ್ಷೆಗಳ‌ ಆಮಿಷವೊಡ್ಡಿ ಹೆಚ್ಚು ಶುಲ್ಕ ಹೇಳಿದ್ರೆ ಹುಷಾರ್..!

ಸ್ಪರ್ಧಾತ್ಮಕ ಪರೀಕ್ಷೆಗಳ‌ ಆಮಿಷವೊಡ್ಡಿ ಹೆಚ್ಚು ಶುಲ್ಕ ಹೇಳಿದ್ರೆ ಹುಷಾರ್..!
bangalore , ಭಾನುವಾರ, 5 ಜೂನ್ 2022 (20:19 IST)
ಸ್ಪರ್ಧಾತ್ಮಕ ಪರೀಕ್ಷೆಗಳ‌ ಆಮಿಷವೊಡ್ಡಿ ಹೆಚ್ಚು ಶುಲ್ಕ ವಸೂಲಿ‌ ಮಾಡಿದ್ರೆ ಅಂತಹ ಶಾಲೆಗಳ ಮಾನ್ಯತೆ ರದ್ದು ಮಾಡಲಾಗುತ್ತೆ ಅಂತಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಇದ್ರ ಜೊತೆಗೆ, ಇಂತಹ ಕಾನೂನು ಬಾಹಿರ ಚಟುವಟಿಕೆ ನಡೆಸುವ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ವಾರ್ನಿಂಗ್ ಮಾಡಲಾಗಿದೆ. ಈ ಬಗ್ಗೆ ಖಾಸಗೀ ಶಾಲೆಗಳು ಗರಂ ಆಗಿದ್ದು,ರಾಜ್ಯದಲ್ಲಿರುವ ಯಾವುದೇ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌, ಜೆಇಇ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವೈಯಕ್ತಿಕವಾಗಿ ಆಗಲಿ ಅಥವಾ ಬೇರೆ ಕೋಚಿಂಗ್‌ ಸಂಸ್ಥೆಗಳ ಮೂಲಕವಾಗಲಿ ತರಬೇತಿ ನೀಡುವ, ತರಬೇತಿ ಹೆಸರಲ್ಲಿ ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಅಂತಹ ಕಾಲೇಜುಗಳ ಮಾನ್ಯತೆ ರದ್ದು ಮಾಡಲಾಗುತ್ತೆ ಅಂತಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ, ಇಂತಹ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವಂತಹ ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿಯೂ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ವಾರ್ನಿಂಗ್ ನೀಡಿದೆ.
ಕರೊನಾ ಕಾರಣದಿಂದ ಸುಮಾರಷ್ಟು ಜನ ಪೋಷಕರು ಸಂಕಷ್ಟದಲ್ಲಿದ್ದಾರೆ. ಇದ್ರ ನಡುವೆ ನಿಟ್, ಸಿಇಟಿ, ಜೆಇಇ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಆಸೆಯನ್ನ ಪೋಷಕರಿಗೆ ತೋರಿಸಿ, ಹೆಚ್ಚಿನ ಹಣ ಕೀಳುವ ಕೆಲಸವನ್ನು ಈ ಹಿಂದೆ ಕೆಲವು ಖಾಸಗೀ ಶಾಲೆಗಳು ಮಾಡಿದ್ವು. ಹೀಗಾಗೀ ಶಿಕ್ಷಣ ಇಲಾಖೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಅಂತಹ ಶಾಲೆಗಳ ಮಾನ್ಯತೆ ರದ್ದು ಮಾಡುವ ವಾರ್ನಿಂಗ್ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖಾಸಗೀ ಶಾಲೆಗಳ ಒಕ್ಕೂಟದ ( ಕ್ಯಾಮ್ಸ್ ) ಕಾರ್ಯದರ್ಶಿ, ಇದೊಂದು ಗಾಳಿಯಲ್ಲಿ ಗುಂಡು ಹೊಡೆಯುವ ಪ್ರಯತ್ನ, ಬೇರೆ ರಾಜ್ಯಗಳಿಂದ ಬಂದು ಜಾಹೀರಾತು ಹಾಕಿ ಇದನ್ನ ಮಾಡ್ತಾರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಸವಾಲು ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮಕೇರ್ ಟ್ರಸ್ಟ್ ಯಿಂದ ಗಿಡನೆಡುವ ಕಾರ್ಯಕ್ರಮ