Publish Date: Sat, 28 Apr 2018 (06:54 IST)
Updated Date: Sat, 28 Apr 2018 (06:55 IST)
ಮಂಡ್ಯ: ಮುಂಬರುವ ವಿಧಾನಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಕ್ಕರೂ ಬೇಡವೆಂದು ಕುಳಿತಿದ್ದ ರೆಬಲ್ ಸ್ಟಾರ್ ಅಂಬರೀಷ್ ಗೆ ಇದೀಗ ಜೆಡಿಎಸ್ ಗಾಳ ಹಾಕುತ್ತಿದೆ.
ಜೆಡಿಎಸ್ ನಿಂದ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎಂ. ಶ್ರೀನಿವಾಸ್ ಅಂಬರೀಷ್ ಬೆಂಬಲ ಕೋರಿದ್ದಾರೆ. ಇದಕ್ಕಾಗಿ ಅಂಬಿ ಜತೆ ಮಾತುಕತೆಯನ್ನೂ ನಡೆಸಿದ್ದಾರೆ.
ಮಂಡ್ಯದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಗೆ ಭಾರೀ ವರ್ಚಸ್ಸಿದೆ. ಹೀಗಾಗಿ ಅವರ ಬೆಂಬಲ ಕೋರಿ ಚುನಾವಣೆ ಗೆಲ್ಲಲು ಜೆಡಿಎಸ್ ನಾಯಕ ತಂತ್ರ ರೂಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.