Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ ಘರ್ಜನೆ ಆರಂಭ

JCB starts roaring again in Bangalore
bangalore , ಸೋಮವಾರ, 10 ಅಕ್ಟೋಬರ್ 2022 (21:14 IST)
ಎರಡನೇ ಹಂತದ ಒತ್ತುವರಿ ತೆರವು ಕಾರ್ಯವನ್ನ ಬಿಬಿಎಂಪಿ ಆರಂಭಿಸಿದೆ.ಕೆ ಆರ್ ಪುರ ವ್ಯಾಪ್ತಿಯ ಕೆಂಬ್ರಿಡ್ಜ್ ಕಾಲೇಜು ಹಿಂಭಾಗದಿಂದ ತೆರವು ಕಾರ್ಯ ಆರಂಭವಾಗಿದೆ.ಎಸ್ ಆರ್ ಲೇಔಟ್ ನಲ್ಲಿ ಸುಮಾರು 300 ಮೀಟರ್ ಒತ್ತುವರಿ ತೆರವು ಕಾರ್ಯಾಚರಣೆ ಬಿಬಿಎಂಪಿ ನಡೆಸಲಿದೆ.ರಾಜಕಾಲುವೆ ಮೇಲಿರುವ ಕಾಂಪೌಂಡ್ ತೆರವು ಬಿಬಿಎಂಪಿ ಮಾಡಿದೆ.ಈಗಾಗಲೇ ರಾಜಕಾಲುವೆ ಒತ್ತುವರಿ ಬಗ್ಗೆ ಬಿಬಿಎಂಪಿ ಮಾರ್ಕಿಂಗ್ ಮಾಡಿದೆ.
 
 ರಾಜಕಾಲುವೆ ಒತ್ತುವರಿ ತೆರವು ಪುನರಾರಂಭವಾಗಿದ್ದು. ವೈಟ್ ಫೀಲ್ಡ್  ಬಳಿಯ  ರಾಮಗೊಂಡನಹಳ್ಳಿ, ನಲ್ಲೂರಳ್ಳಿ ಬಳಿ ರಾಜಕಾಲುವೆ ತೆರವು ಕಾರ್ಯಾಚರಣೆ ಮುಂದುವರೆದಿದೆ. ಸ್ಥಳಕ್ಕೆ ಜೆಸಿಬಿ, ಬಿಬಿಎಂಪಿ ಅಧಿಕಾರಿಗಳು ಬಂದಿದ್ದಾರೆ.ಮಹಾದೇವಪುರ ಮುಖ್ಯ ಎಂಜಿನೀಯರ್ ಬಸವರಾಜ್ ಕಬಾಡೆ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಮುಂದುವರೆದಿದೆ.50 ಅಡಿಗೂ ಹೆಚ್ಚು ಶೀಲವಂತನಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಒತ್ತುವರಿಯಾಗಿದೆ.ರಾಜಕಾಲುವೆ ಮೇಲೆ‌ ಕಾಂಪೌಂಡ್ ಹಾಗೂ ಶೆಡ್ ನಿರ್ಮಾಣಮಾಡಲಾಗಿದೆ.ಈಗ 4 ಶೆಡ್ ಹಾಗೂ ಕಾಂಪೌಂಡ್ ತೆರವು ಕಾರ್ಯಾಚರಣೆಗೆ ಶೆಡ್ ಮಾಲೀಕರು ಅಡ್ಡಿಪಡಿಸಿದಾರೆ.ಶೆಡ್ ಮಾಲೀಕರ ವಿರೋಧ ಬಿಬಿಎಂಪಿ ಅಧಿಕಾರಿಗಳು ಪೋಲಿಸರ ಮೊರೆ ಹೋಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜೆ ಸುರಿಧ ದಿಢೀರ್ ಮಳೆಗೆ ಬೆಂಗಳೂರಿನ ಗರುಡಾಮಾಲ್ ಜಂಕ್ಷನ್ ಜಲಾವೃತ