Select Your Language

Notifications

webdunia
webdunia
webdunia
webdunia

BJP ವಿರುದ್ಧ ದಿನೇಶ್​​​ ಗುಂಡೂರಾವ್​​​ ವಾಗ್ದಾಳಿ

BJP ವಿರುದ್ಧ ದಿನೇಶ್​​​ ಗುಂಡೂರಾವ್​​​ ವಾಗ್ದಾಳಿ
bangalore , ಸೋಮವಾರ, 10 ಅಕ್ಟೋಬರ್ 2022 (19:41 IST)
AICC ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೇಲಿರುವಷ್ಟು ಭಯ BJP ನಾಯಕರಿಗೆ ಬೇರೆ ಯಾರ ಮೇಲೂ ಇಲ್ಲ ಎಂದು 
KPCC ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿಯವರನ್ನು ಕೆಟ್ಟದಾಗಿ ಬಿಂಬಿಸಲು BJP ಕೋಟ್ಯಂತರ ಹಣ ವ್ಯಯಿಸುತ್ತಿರುವುದು ಅಕ್ಷರಶಃ ಸತ್ಯ. ಬಹುಶಃ ಬಿಜೆಪಿಯವರಿಗೆ ರಾಹುಲ್ ಗಾಂಧಿಯವರ ಮೇಲಿರುವ ಭಯ ಇನ್ಯಾರ ಮೇಲೂ ಇಲ್ಲ. ಆ ಭಯದಿಂದಲೇ, ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಬಿಜೆಪಿಯ ಟ್ರೋಲ್ ಪೇಜ್‌ಗಳು, ಫೇಕ್ ಫ್ಯಾಕ್ಟರಿಗಳು ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಗಾಂಧಿಯವರಷ್ಟು ನಿರಂತರ ಅಪಮಾನ ಹಾಗೂ ಸುಳ್ಳು ಆರೋಪಗಳಿಗೆ ಗುರಿಯಾದವರಿಲ್ಲ. ನೇರವಾದ ಮರಕ್ಕೆ ಕೊಡಲಿ ಪೆಟ್ಟು ಜಾಸ್ತಿ ಎಂಬಂತೆ, ರಾಹುಲ್‌ರವರ ನೇರವಂತಿಕೆ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಯ ಪ್ರೀತಿಯ ವ್ಯಕ್ತಿತ್ವ ಬಿಜೆಪಿಯವರ ನಿದ್ದೆಗೆಡಿಸಿದೆ. ದ್ವೇಷಕಾರುವ ಬಿಜೆಪಿಯವರಿಗೆ ಪ್ರೀತಿಯ ರಾಯಭಾರಿ ಆಗಿರುವ ರಾಹುಲ್ ಕಂಡರೆ ಹೆದರಿಕೆ ಸಹಜ ಎಂದು ಹೇಳಿದ್ದಾರೆ. BJPಯವರು ತಮ್ಮ ವಿರುದ್ದ ಎಷ್ಟೇ ಅಪಪ್ರಚಾರ ಮಾಡಿದರೂ, ಅದೆಷ್ಟೇ ಅಪಹಾಸ್ಯ ಮಾಡಿದರೂ ರಾಹುಲ್​​ ಗಾಂಧಿಯವರು ಎದೆಗುಂದಿಲ್ಲ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 3 ದಿನ ಭಾರೀ ಮಳೆ ಸಾಧ್ಯತೆ