Select Your Language

Notifications

webdunia
webdunia
webdunia
webdunia

ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಷಣೆ

ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಷಣೆ
ಕೋಲಾರ , ಶನಿವಾರ, 20 ಅಕ್ಟೋಬರ್ 2018 (15:19 IST)
ಬೆಳ್ಳಂಬೆಳಗ್ಗೆಯೇ ಜೆಸಿಬಿ ವಾಹನವು ಘರ್ಜಿಸಿದೆ. ಖಾಸಗಿಯವರಿಂದ ಒತ್ತುವರಿಯಾಗಿದ್ದ ಸರ್ಕಾರದ ಜಮೀನನ್ನು ವಶಕ್ಕೆ ಪಡೆಯಲಾಗಿದೆ.

 ಕೋಲಾರದ ಆರ್ ಜಿ ಲೇಔಟ್ ಪ್ರದೇಶದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಸರ್ಕಾರ ಜಮೀನು ಮಂಜೂರು ಮಾಡಿದೆ. ಸದರಿ ಜಮೀನಿನಲ್ಲಿ ಈಗಾಗಲೇ ಕಾಮಗಾರಿಯೂ ಶುರುವಾಗಿದೆ. ಈ ಮಧ್ಯೆ ವಾಲ್ಮೀಕಿ ಭವನಕ್ಕೆ ಸೇರಿರುವ ಜಮೀನಿನ ಪೈಕಿ ಎರಡೂಕಾಲು ಗುಂಟೆ ವಿಸ್ತೀರ್ಣದ ಪ್ರದೇಶವು ಒತ್ತುವರಿಯಾಗಿದೆ ಅನ್ನೋ ದೂರು ಕೇಳಿ ಬಂದಿತ್ತು.

ಪಕ್ಕದಲ್ಲಿಯೇ ಹೊಸದಾಗಿ ನಿರ್ಮಾಣ ಆಗ್ತಿರೋ ಕಲ್ಯಾಣ ಮಂಟಪದವರು ವಾಲ್ಮೀಕಿ ಭವನದ ಜಮೀನನ್ನು ಅತಿಕ್ರಮಿಸಿದ್ದಾರೆ ಅನ್ನೋ ದೂರು ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ಜಮೀನಿನ ಸರ್ವೇ ನಡೆದು ಅತಿಕ್ರಮಿಸಿರುವ ಆರೋಪವೂ ಸಾಬೀತಾಗಿತ್ತು. ಇದೆಲ್ಲದರ ಫಲವಾಗಿ  ಅಧಿಕಾರಿಗಳ ತಂಡ ಸಹಿತ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಮಂಜುನಾಥ, ಒತ್ತುವರಿ ಸ್ಥಳದಲ್ಲಿನ ಅನಧಿಕೃತವಾಗಿ ನಿರ್ಮಾಣಗಳನ್ನು ತೆರವಿಗೆ ಸೂಚಿಸಿದರು. ಒತ್ತುವರಿಯಾಗಿದ್ದ ಜಮೀನನ್ನು ವಶಕ್ಕೆ ಪಡೆದರು.



Share this Story:

Follow Webdunia kannada

ಮುಂದಿನ ಸುದ್ದಿ

ಟೀ ಕುಡಿದ ಹಣ ಕೇಳಿದ್ದಕ್ಕೆ ಬೇಕರಿ ಮಾಲೀಕನ ಮೇಲೆ ಹಲ್ಲೆ