Publish Date: Sat, 20 Oct 2018 (15:14 IST)
Updated Date: Sat, 20 Oct 2018 (15:16 IST)
ಟೀ ಕುಡಿದ ಹಣವನ್ನು ಕೇಳಿದ ಬೇಕರಿ ಮಾಲೀಕ ಸೇರಿ ಅಲ್ಲಿ ಕೆಲಸ ಮಾಡುವಂತವರ ಮೇಲೆ ನಾಲ್ಕು ಜನ ಕಿಡಿಗೇಡಿಗಳು ಹಲ್ಲೆ ನಡೆಸಿರುವಂತಹ ಘಟನೆ ನಡೆದಿದೆ.
ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ಬಿಲ್ಲಾಪುರಗೇಟ್ ಪಿಂಪಲ್ಸ್ ಮಾರ್ಟ್ ಬಳಿ ಈ ಘಟನೆ ನಡೆದಿದೆ. ಇನ್ನು ಈ ಘಟನೆ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ಜನ ಕಿಡಿಗೇಡಿಗಳು ಬೇಕರಿಗೆ ಬಂದು ಟೀ ಯನ್ನು ಕುಡಿದಿದ್ದಾರೆ. ನಂತರ ಹಣ ಕೇಳಿದ ಬೇಕರಿ ಮಾಲೀಕ ಸೇರಿ ಅಲ್ಲಿ ಕೆಲಸ ಮಾಡುವಂತವರ ಮೇಲೆ ಈ ನಾಲ್ಕು ಜನ ಕಿಡಿಗೇಡಿಗಳು ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಕಿಡಿಗೇಡಿಗಳ ದುಂಡಾವರ್ತನೆಯ ದೃಶ್ಯಗಳು ಬೇಕರಿಯಲ್ಲಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಯುವಕರು ಸ್ಥಳೀಯ ನಿವಾಸಿಗಳಾಗಿದ್ದು ಪೊಲೀಸರ ಹಾಗೂ ಜನಪ್ರತಿನಿಧಿಗಳು ಇವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದರೂ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸುತ್ತಾರೆ. ಇನ್ನು ಹಲ್ಲೆಗೊಳಗಾದ ಬೇಕರಿ ಮಾಲೀಕ ಬದ್ರುದ್ದೀನ್ ಸರ್ಜಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಆ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ರಕ್ಷಣೆ ಕೋರಿದ್ದಾರೆ.