Select Your Language

Notifications

webdunia
webdunia
webdunia
webdunia

ಜಯನಗರ ವಾರ್ಡ್ ಹೆಸರು ಬದಲಾವಣೆಗೆ ಈಗ ಭಾರೀ ವಿರೋಧ

ಜಯನಗರ ವಾರ್ಡ್ ಹೆಸರು ಬದಲಾವಣೆಗೆ  ಈಗ ಭಾರೀ ವಿರೋಧ
bangalore , ಶುಕ್ರವಾರ, 24 ಜೂನ್ 2022 (20:35 IST)
ಬಿಬಿಎಂಪಿ ವಾರ್ಡ್ ಮರು ವಿಂಗಡನೆಯಲ್ಲಿ  ಸಾಲು ಸಾಲು  ಎಡವಟ್ಟುಗಳನ್ನ ಮಾಡಿದೆ. ಜಯನಗರ ವಾರ್ಡ್ ಹೆಸರು ಬದಲಾವಣೆಗೆ  ಈಗ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಜಯನಗರ ವಾರ್ಡ್ ಅನ್ನು  ಅಶೋಕ ಪಿಲ್ಲರ್ ವಾರ್ಡ್ ಎಂದು ಬದಲಿಸಿರುವ ಬಿಬಿಎಂಪಿ ಡಿಲಿಮಿಟೇಷನ್ ಕಮಿಟಿಗೆ ಈಗ ತಲೆನೋವಾಗಿದೆ.ಜಯನಗರ ವಾರ್ಡ್ ಏಷ್ಯಾಖಂಡದಲ್ಲೆ ಅತ್ಯಂತ ದೊಡ್ಡ ವಾರ್ಡ್ ಎನ್ನುವ ಹೆಸರು ಪಡೆದಿದೆ. ಸ್ವಾತಂತ್ರ್ಯ ಬಂದ ನಂತರ ಘೋಷಣೆಯಾದ ಮೊದಲ ವಾರ್ಡ್ ಇದು,  ಹಾಗಾಗಿ ಈ ವಾರ್ಡ್ ಹೆಸ್ರು ಬದಲಿಸೋದು ಸರಿಯಲ್ಲ, ಜಯನಗರ ವಾರ್ಡ್ ಹೆಸರನ್ನು ಉಳಿಸಿಕೊಳ್ಳೋದು ನಮ್ಮ ಆಧ್ಯ ಕರ್ತವ್ಯ ಅಂತ  ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆ ಬಿಬಿಎಂಪಿ ವಿರುದ್ದ ಗರಂ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜುಲೈ 25ಕ್ಕೆ ವಸತಿ ಇಲಾಖೆಯ 1967 ಮನೆಗಳ ಲೋಕಾರ್ಪಣೆ : ವಿ ಸೋಮಣ್ಣ