Select Your Language

Notifications

webdunia
webdunia
webdunia
webdunia

ಜುಲೈ 25ಕ್ಕೆ ವಸತಿ ಇಲಾಖೆಯ 1967 ಮನೆಗಳ ಲೋಕಾರ್ಪಣೆ : ವಿ ಸೋಮಣ್ಣ

ಜುಲೈ 25ಕ್ಕೆ  ವಸತಿ ಇಲಾಖೆಯ 1967 ಮನೆಗಳ  ಲೋಕಾರ್ಪಣೆ : ವಿ ಸೋಮಣ್ಣ
bangalore , ಶುಕ್ರವಾರ, 24 ಜೂನ್ 2022 (20:32 IST)
ರಾಜೀವ್ ಗಾಂಧಿ ವಸತಿ ನಿಗಮದಿಂದ  ನಿರ್ಮಿಸಲಾಗುತ್ತಿರುವ  1967 ಮನೆಗಳನ್ನು ಜುಲೈ 25 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ  ಎಂದು ವಸತಿ ಹಾಗೂ  ಮೂಲಸೌಲಭ್ಯ  ಅಭಿವೃದ್ಧಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
 
ಇಂದು ನಗರದ ದಾಸರಹಳ್ಳಿ, ಯಲಹಂಕ, ಬ್ಯಾಟರಾಯನಪುರ,  ಮಹಾದೇವಪುರ  ಮತ್ತು  ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಗಳಲ್ಲಿ  ನಿರ್ಮಿಸಲಾಗುತ್ತಿರುವ  ಬಹುಮಹಡಿ ಕಟ್ಟಡಗಳ ಕಾಮಗಾರಿ  ಪರಿಶೀಲನೆ ನಡೆಸಿ  ಮಾತಾನಾಡಿದ ಅವರು  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಸೂರಿಲ್ಲದವರಿಗೆ ಸೂರು’ ಎಂಬ ಧ್ಯೇಯದಡಿ  2016-17 ಮತ್ತು 2017-18 ರಲ್ಲಿ ‘ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಗೆ   ಕೇಂದ್ರ ಸರ್ಕಾರವು ಪ್ರತಿ ಮನೆಯ ನಿರ್ಮಾಣಕ್ಕೆ ರೂ.1.50 ಲಕ್ಷಗಳನ್ನು ನೀಡಲಿದ್ದು , ಅದರಂತೆ 1 ಲಕ್ಷ ಮನೆಗಳ ನಿರ್ಮಾಣಕ್ಕೆ ರೂ. 1500 ಕೋಟಿ ಅನುದಾನ ನಿಗದಿಯಾಗಿದ್ದು, ಈ ಪೈಕಿ ಮೊದಲನೇ ಕಂತಿನ  ರೂ .600 ಕೋಟಿ  ಅನುದಾನ ಬಿಡುಗಡೆಯಾಗಿ, ಕಂದಾಯ ಇಲಾಖೆಯಿಂದ 553 ಎಕರೆ ಜಮೀನನ್ನು ನಿಗಮಕ್ಕೆ  ಹಸ್ತಾಂತರಿಸಿಕೊಳ್ಳಲಾಗಿದೆ ಎಂದರು.
 
ವಸತಿ ಇಲಾಖೆ ನಿರ್ಮಿಸುತ್ತಿರುವ ಮನೆಗಳನ್ನು ಕೂಲಿ ಕಾರ್ಮಿಕರು, ಆಟೋ ಚಾಲಕರು, ಗಾರ್ಮೆಂಟ್ಸ್ ನೌಕರರು, ಬೀಡಿ ಕಟ್ಟುವವರು, ಬೀದಿ ಬದಿ ವ್ಯಾಪಾರಿಗಳು ಸೇರಿ ಅರ್ಹ ಬಡವರಿಗೆ ಮನೆಗಳನ್ನು ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ಜನರು ರೂ.5.50 ಲಕ್ಷ  ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 5 ಲಕ್ಷ ರೂ. ಪಾವತಿಸಬೇಕಾಗಿದ್ದು, ಮಧ್ಯಮ ವರ್ಗದವರು ಯಾವ ರೀತಿಯಲ್ಲಿ ಜೀವನ ನಡೆಸುತ್ತಾರೋ ಅದೇ ರೀತಿಯಲ್ಲಿ ಬಡವರು ಸಹ  ಬದುಕಬೇಕು ಎಂಬುದು ನನ್ನ ಆಶಯವಾಗಿದೆ ಎಂದರು .
 
ಒಂದು ತಿಂಗಳೊಳಗೆ ಫಲಾನುಭವಿಗಳಿಗೆ  ಕುಡಿಯುವ  ನೀರಿನ ಟ್ಯಾಂಕ್  ನಿರ್ಮಾಣ ಮಾಡಿಸಿ  ಅಗತ್ಯ  ಮೂಲಭೂತ ಸೌಕರ್ಯಗಳನ್ನು  ತ್ವರಿತಗತಿಯಲ್ಲಿ ಮಾಡಿಕೊಡಲಾಗುವುದು. ರೂ. 1.00  ಲಕ್ಷ ನೀಡಿರುವ ಫಲಾನುಭವಿಗಳಿಗೆ  ಮನೆಗಳನ್ನು ನೀಡಿ ತಕ್ಷಣವೇ  ಬ್ಯಾಂಕ್ ಲೋನ್ ಮಾಡಿಸಿಕೊಡಲಾಗುವುದು, ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಹಾಗೂ ಫಲಾನುಭವಿಗಳಿಗೆ ತೊಂದರೆಯಾಗದಂತೆ ಮುಖ್ಯಮಂತ್ರಿಗಳು  ಹಣವನ್ನು ಒದಗಿಸಿದ್ದಾರೆ  ಎಂದರು. ಏಳರಿಂದ 8 ಸಾವಿರ  ಮನೆಗಳನ್ನು ಅಕ್ಟೋಬರ್  ಅವಧಿಗೆ ಹಾಗೂ  ಮಾರ್ಚ್ ಒಳಗಡೆ ಸುಮಾರು 25000 (1BHK) ಮನೆಗಳನ್ನು  ಲೋಕಾರ್ಪಣೆ ಮಾಡಲಾಗುವುದು ಎಂದರು.
 
ನವೆಂಬರ್ ತಿಂಗಳೊಳಗೆ  46000 ಮನೆಗಳಿಗೆ  ಹೆಚ್ಚುವರಿ 7000 ಮನೆಗಳ  ಸೇರಿಸಿ  53000 ಮನೆಗಳ ನಿರ್ಮಾಣ ಮಾಡುವುದರ ಜೊತೆಗೆ ಶೇ 60% ಮನೆಗಳನ್ನು ವಾಸಕ್ಕೆ ಯೋಗ್ಯವಾಗಿ  ಮಾಡಿ ಫಲಾನುಭವಿಗಳಿಗೆ  ನೀಡುವಂತ ಕೆಲಸ ಮಾಡಲಾಗುವುದು ಎಂದರು .
 
ಈ ಸಂದರ್ಭದಲ್ಲಿ  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಡಾ.  ಎಸ್.ಬಸವರಾಜು, ವಸತಿ ಇಲಾಖೆಯ ಅಧಿಕಾರಿಗಳು ಹಾಗೂ  ಮತ್ತಿತರರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಗ್ನಿಪತ್ ಯೋಜನೆ ವಿರೋಧಿಸಿ 27ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ