Select Your Language

Notifications

webdunia
webdunia
webdunia
webdunia

ಜಯದೇವ ಆಸ್ಪತ್ರೆ ನೂತನ ಬ್ಲಾಕ್

ಜಯದೇವ ಆಸ್ಪತ್ರೆ ನೂತನ ಬ್ಲಾಕ್
ಬೆಂಗಳೂರು , ಗುರುವಾರ, 18 ನವೆಂಬರ್ 2021 (16:01 IST)
ಜಯದೇವ ಹೃದ್ರೋಗ ಆಸ್ಪತ್ರೆಯ ಆವರಣದಲ್ಲಿ ಇನ್ಫೋಸಿಸ್‌ ಫೌಂಡೇಶನ್‌ ವತಿಯಿಂದ ನಿರ್ಮಾಣಗೊಂಡಿರುವ ನೂತನ ಕಟ್ಟಡ (ಇನ್ಫೋಸಿಸ್‌ ಬ್ಲಾಕ್‌) ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದಾರೆ.
 
350 ಬೆಡ್‌ಗಳ ಸೌಲಭ್ಯ ಹೊಂದಿರುವ ನೂತನ ಘಟಕ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.. ಸುಧಾಕರ್‌, ಇನ್ಫೋಸಿಸ್‌ ಗೌರವಾನ್ವಿತ ಅಧ್ಯಕ್ಷ ಎನ್‌.ಆರ್‌. ನಾರಾಯಣ ಮೂರ್ತಿ, ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ, ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕಿ ಸೌಮ್ಯ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
 
"ಹೊಸ ಕಟ್ಟಡವನ್ನು 103 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಒಂದೇ ಸೂರಿನಡಿ 15 ಕಾರ್ಡಿಯಾಕ್‌ ಕ್ಯಾಥ್‌ ಲ್ಯಾಬ್‌ಗಳನ್ನು ಹೊಂದಿರುವ ಏಕೈಕ ಸರಕಾರಿ ಸಂಸ್ಥೆ ಜಯದೇವ ಹೃದ್ರೋಗ ಸಂಸ್ಥೆಯಾಗಿದೆ. ಹೃದಯದ ಚಿಕಿತ್ಸೆಯ ತುರ್ತುಸ್ಥಿತಿಗಳು ಮತ್ತು ಹೃದಯ ಆರೈಕೆಗಾಗಿ ಪ್ರತಿದಿನ ಹೆಚ್ಚುತ್ತಿರುವ ಪ್ರಕರಣಗಳನ್ನು ನಿರ್ವಹಿಸಲು ನೂತನ ಕಟ್ಟಡ ನೆರವಾಗಲಿದೆ, ಆರ್ಥಿಕವಾಗಿ ದುರ್ಬಲರಾಗಿರುವ ಹೃದ್ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡುವುದು ಇದರ ಉದ್ದೇಶ" ಎಂದು ಜಯದೇವ ಹೃದ್ರೋಗ ಚಿಕಿತ್ಸಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಿಂದ ಜನ ಸ್ವರಾಜ್ ಕಾರ್ಯಕ್ರಮ ಭರ್ಜರಿ ತಯಾರಿ